ದೇವನಹಳ್ಳಿ: ದಸರಾ ಹಬ್ಬ. ಹೀಗಾಗಿ ಅನೇಕ ಕಂಪನಿಗಳು, ಸಂಸ್ಥೆಗಳು ತಮ್ಮ ತಮ್ಮ ಸಿಬ್ಬಂದಿಗೆ ಬೋನಸ್ ಕೊಟ್ಟಿದ್ದಾರೆ. ಇಲ್ಲೊಂದು ಗ್ರಾಮ ಪಂಚಾಯ್ತಿಯಲ್ಲಿ ಬೋನಸ್ ಕೊಟ್ಟಿಲ್ಲ ಅಂತ ಗ್ರಾಮ ಪಂಚಾಯ್ತಿ ಕಟ್ಟಡಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಿಡಿಸಿದ್ದಾನೆ ಒಬ್ಬ ಆಸಾಮಿ.
ಹೌದು, ಈ ಘಟನೆ ನಡೆದಿರೋದು ಆವತಿ ಗ್ರಾಮ ಪಂಚಾಯ್ತಿಯಲ್ಲಿ. ಇಲ್ಲಿನ ಗ್ರಾಮ ಪಂಚಾಯಿತಿ ಸ್ವಚ್ಛತಾ ಕೆಲಸಗಾರ ಕೃಷ್ಣಪ್ಪ ಈ ಕೃತ್ಯ ಎಸಗಿದ್ದಾನೆ. ಹೊಸ ಸಮವಸ್ತ್ರ ಹಾಗೂ ಬೋನಸ್ ಕೊಟ್ಟಿಲ್ಲ ಅಂತ ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ವಿಷಯ ಗೊತ್ತಾಗ್ತಾ ಇದ್ದಂತೆ ಇಲ್ಲಿನ ಅಧಿಕಾರಿ ಬಂದು ಚಪ್ಪಲಿ ಹಾರ ತೆಗೆದುಹಾಕಿದ್ದಾರೆ. ನಂತರ ಸಿಸಿ ಕ್ಯಾಮರಾ ನೋಡಿದಾಗ ಕೃಷ್ಣಪ್ಪ ಹೀಗೆ ಮಾಡಿದ್ದಾನೆ ಎಂದು ಗೊತ್ತಾಗಿದೆ.
ಇನ್ನು ಸುನೀಲ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಕೃಷ್ಣಪ್ಪನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕುಡಿದ ಮತ್ತಿನಲ್ಲಿ ಸಿಟ್ಟಿಗೆದ್ದು ಹೀಗೆ ಮಾಡಿದ್ದಾನೆ ಎಂಬ ವಿಚಾರ ಬಹಿರಂಗವಾಗಿದೆ. ಜೊತೆಗೆ ಇನ್ನೊಮ್ಮೆ ಹೀಗಾಗೋದಿಲ್ಲ ಅಂತ ಪೊಲೀಸರ ಬಳೀ ಕೃಷ್ಣಪ್ಪ ಕೇಳಿದ್ದಾನೆ. ಇದೊಂದು ಗಂಭೀರವಲ್ಲದ ಕೃತ್ಯ ಎಂದು ಪೊಲೀಸರು ಪರಿಗಣಿಸಿದ್ದಾರೆ.