ಮೈಸೂರು: ದಸರಾ ದೀಪಾಲಂಕಾರ ಇಂದಿನಿಂದ 9 ದಿನಗಳ ಕಾಲ ಮುಂದುವರೆಯಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕೃತವಾಗಿ ಘೋಷಿಸಿದ್ದಾರೆ.
ಸುತ್ತೂರು ಶಾಖಾ ಮಠದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ದಸರಾ ದೀಪಾಲಂಕಾರ ಮುಂದುವರೆಸಬೇಕು ಎಂಬ ಜನರ ಬೇಡಿಕೆ ಹಿನ್ನೆಲೆಯಲ್ಲಿ ಇಂದಿನಿಂದ 9 ದಿನಗಳ ಕಾಲ ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರ ಮುಂದುವರೆಯಲಿದೆ ಎಂದರು.
ಹೊಲದಲ್ಲಿ ಉಳುಮೆ ಮಾಡುವಾಗಲೇ ನಡೆದಿದೆ ಹೃದಯ ವಿದ್ರಾವಕ ಘಟನೆ
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಸರಳವಾಗಿ ದಸರಾ ಆಚರಿಸಲಾಗುತ್ತಿದ್ದು, ವಿಶ್ವವಿಖ್ಯಾತ ಜಂಬೂಸವಾರಿ ಅರಮನೆಗೆ ಮಾತ್ರ ಸೀಮಿತವಾಗಿದೆ. ನಾಡ ಹಬ್ಬ ದಸರಾ ಸರಳವಾಗಿ ಆಚರಿಸಲಾಗುತ್ತಿದ್ದರೂ ವಿದ್ಯುತ್ ದೀಪಾಲಂಕಾರದಿಂದ ಅರಮನೆ ನಗರಿ ಮೈಸೂರು ಜಗಮಗಿಸುತ್ತಿದೆ. ಈ ವಿದ್ಯುತ್ ದೀಪಾಲಂಕಾರವೇ ಚಿತ್ತಾಕರ್ಷಕವಾಗಿದ್ದು, ದೀಪಾಲಂಕಾರ ನೋಡಲೆಂದೇ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಆಗಸದಲ್ಲಿರುವಾಗಲೇ ʼಕ್ಯಾಬ್ ಬುಕಿಂಗ್ʼ ವ್ಯವಸ್ಥೆ ಪರಿಚಯಿಸಿದ ಸ್ಪೈಸ್ಏರ್
ದೀಪಾಲಂಕಾರವನ್ನು ದಸರಾ ಮುಗಿದ ಬಳಿಕವೂ ವಿಸ್ತರಿಸಬೇಕು ಎಂದು ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿತ್ತು. ಇದರಿಂದ ಪ್ರವಾಸೋದ್ಯಮ ಅಭಿವೃದ್ದಿಗೂ ಪೂರಕವಾಗಲಿದೆ ಎಂದು ತಿಳಿಸಿತ್ತು. ಜಿಲ್ಲಾಡಳಿತದ ಮನವಿ, ಜನರ ಬೇಡಿಕೆಗೆ ಮಣಿದ ರಾಜ್ಯ ಸರ್ಕಾರ ದಸರಾ ದೀಪಾಲಂಕಾರವನ್ನು 9 ದಿನಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದೆ.