ಹಾಲಿನ ದರ ಏರಿಸಿ ಎಂದು ಹಾಲು ಉತ್ಪಾದಕರ ಒಕ್ಕೂಟದ ಸದಸ್ಯರು ಹಾಗೂ ನಾಯಕರು, ಮೈಸೂರು ಬ್ಯಾಂಕ್ ಸರ್ಕಲ್ ನಿಂದ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಸಿದ್ದಾರೆ.
ನೀರಿಗೆ ಕೊಡೋ ಬೆಲೆ ಹಾಲಿಗೆ ಕೊಡುತ್ತಿಲ್ಲ, ಹೆಂಡಕ್ಕೆ ಕೊಡೋ ಬೆಲೆ ಹಾಲಿಗೆ ಕೊಡುತ್ತಿಲ್ಲ, ಸಹಾಯ ಧನ ಕೂಡ ಬಿಡುಗಡೆ ಮಾಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪಿಸಿರುವ ಹಾಲು ಉತ್ಪಾದಕರ ಒಕ್ಕೂಟ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ಒಂದು ಲೀ. ಹಾಲಿನ ದರ 40 ರೂಪಾಯಿಗೆ ಏರಿಸಬೇಕು. ನಮ್ಮ ಜೀವನಕ್ಕೆ ನಾವು ನಂಬಿಕೊಂಡಿರುವುದು, ನಮಗೆ ಗೊತ್ತಿರುವುದು ಇದೊಂದೇ ಕಸುಬು. ನೀರು, ಹೆಂಡಕ್ಕೆ ಕೊಡೋ ಕಿಮ್ಮತ್ತು ಹಾಲಿಗೆ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ನೀವು ಕೊಡುವ ಸಹಾಯಧನ ಕೇವಲ ನೆಪ ಮಾತ್ರ, ಬಾಯಲ್ಲಿ ಹೇಳುತ್ತಿರಾ ಆದರೆ ಯಾವುದೇ ಬೆಳವಣಿಗೆ ಆಗುತ್ತಿಲ್ಲ. ಸಿಎಂ ಅವರೆ ಹಾಲು ಉತ್ಪಾದಕರನ್ನ ಕಡೆಗಣಿಸಬೇಡಿ, ಮೊದಲು ನಮ್ಮೊಂದಿಗೆ ಸಭೆ ಮಾಡಿ ನಮ್ಮ ಅಹವಾಲುಗಳನ್ನ ಕೇಳಿ ಎಂದು ತಾಕೀತು ಮಾಡಿರುವ ಅವರು, ಸಭೆ ನಡೆಸಿ ಹಾಲಿನ ದರ ಏರಿಸದಿದ್ದರೆ ಸಂಕ್ರಾಂತಿ ಹಬ್ಬದಿಂದ ಚಾಲುಕ್ಯ ಸರ್ಕಲ್ ನಲ್ಲಿ ನಿರಂತರ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.