alex Certify ದಯವಿಟ್ಟು ಆತ್ಮಹತ್ಯೆ ನಿರ್ಧಾರ ಕೈಬಿಡಿ; ನಮ್ಮ ನೋವನ್ನು ಹೆಚ್ಚಿಸಬೇಡಿ; ಅಪ್ಪು ಅಭಿಮಾನಿಗಳಿಗೆ ರಾಘವೇಂದ್ರ ರಾಜಕುಮಾರ್ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಯವಿಟ್ಟು ಆತ್ಮಹತ್ಯೆ ನಿರ್ಧಾರ ಕೈಬಿಡಿ; ನಮ್ಮ ನೋವನ್ನು ಹೆಚ್ಚಿಸಬೇಡಿ; ಅಪ್ಪು ಅಭಿಮಾನಿಗಳಿಗೆ ರಾಘವೇಂದ್ರ ರಾಜಕುಮಾರ್ ಮನವಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ಮನನೊಂದ ಅಭಿಮಾನಿಗಳ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಅಪ್ಪು ಅಗಲಿಕೆ ನೋವಿಂದ ತೀವ್ರವಾಗಿ ನೊಂದಿರುವ ರಾಜ್ ಕುಟುಂಬ ಇದೀಗ ಅಭಿಮಾನಿಗಳ ದುಡುಕಿನ ನಿರ್ಧಾರಕ್ಕೆ ಮತ್ತಷ್ಟು ಘಾಸಿಗೊಳಗಾಗಿದೆ.

ಅಪ್ಪು ಅಗಲಿಕೆ ಬೆನ್ನಲ್ಲೇ ಅಭಿಮಾನಿಗಳು ಸಾವಿಗೆ ಶರಣಾಗುತಿರುವುದು ದೊಡ್ಮನೆ ಕುಟುಂಬಕ್ಕೆ ತುಂಬಾ ನೋವು ತಂದಿದೆ. ಹೀಗಾಗಿ ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ಮಾಡಬೇಡಿ ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಅಪ್ಪು ಇಲ್ಲದ ನೋವಲ್ಲಿ ನಾವೆಲ್ಲರೂ ಇದ್ದೇವೆ. ನೀವು ಆತ್ಮಹತ್ಯೆ ಮಾಡಿಕೊಂಡು ನಮ್ಮ ನೋವನ್ನು ಇನ್ನಷ್ಟು ಹೆಚ್ಚಿಸಬೇಡಿ. ನಮ್ಮ ನೋವನ್ನು ನಿಮ್ಮ ಕುಟುಂಬದವರಿಗೆ ನೀಡಬೇಡಿ. ಈಗಾಗಲೇ ಪುನೀತ್ ಪತ್ನಿ ಸಾಕಷ್ಟು ನೊಂದಿದ್ದಾರೆ. ಇದೀಗ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಇನ್ನಷ್ಟು ಆಘಾತವನ್ನುಂಟು ಮಾಡಿದೆ.

ಅಪ್ಪು ಸಾವಿನಿಂದ ಹೀಗಾಯ್ತು ಎಂದು ಜನ ಮಾತನಾಡಿಕೊಳ್ಳುವಂತೆ ಮಾಡಬೇಡಿ. ಅದರಿಂದ ನಮಗೂ ಒಳ್ಳೆಯದಾಗಲ್ಲ. 12 ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಇದಕ್ಕೆ ನನ್ನ ಪತಿ ಪುನೀತ್ ಕಾರಣ ಎಂಬಂತಾಗುತ್ತದೆ ಎಂದು ಬೇಸರಗೊಂಡಿದ್ದಾರೆ. ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕಳಕಳಿಯಿಂದ ವಿನಂತಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...