ನೀನು ತುಂಬಾ ದಪ್ಪಗಿದ್ದೀಯ, ನನಗೆ ಬೇಡ ಎಂದು ಗರ್ಲ್ ಫ್ರೆಂಡ್ ದೂರಾಗಿದ್ದಕ್ಕೆ ಯುವಕನೊಬ್ಬ ಹಠ ಕಟ್ಟಿ ಸ್ಲಿಮ್ ಆಗಿ ಗಮನ ಸೆಳೆದಿದ್ದಾನೆ. ತೂಕ ಇಳಿಸಿಕೊಳ್ಳುವ ಮೂಲಕ ತನ್ನ ಗೆಳತಿಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡಿದ್ದು, ಆತನ ಪ್ರಯತ್ನ, ಸಾಧನೆ ಗಮನ ಸೆಳೆಯುವಂತಿದೆ.
ಡೊಳ್ಳು ಹೊಟ್ಟೆಯ ಪುವಿ ಎಂಬ ಯುವಕನಿಗೆ ಅತಿಯಾದ ಬೊಜ್ಜು ತೂಕದಿಂದ ಗೆಳತಿಯಿಂದ ದೂರಾಗಬೇಕಾಯಿತು. ಸಂಗಾತಿ ಸಂಬಂಧವನ್ನು ಕೊನೆಗೊಳಿಸಿದ ನಂತರ ಪುವಿ ಸ್ವತಃ ವರ್ಕ್ ಔಟ್ ಮಾಡಲು ನಿರ್ಧರಿಸಿದ್ದಲ್ಲದೇ ಜೀವನಶೈಲಿ ಬದಲಾಯಿಸಿ, ಜಿಮ್ ನತ್ತ ಮುಖಮಾಡಿದನು.
ಆಗ 139 ಕೆಜಿ ತೂಕದ ಪುವಿ, ಶ್ರಮವಹಿಸಿ ವರ್ಕ್ಔಟ್ ಮಾಡಲು ಪ್ರಾರಂಭಿಸುತ್ತಿದ್ದಂತೆ ದೇಹದಲ್ಲಿನ ಬದಲಾವಣೆಯನ್ನು ಕಾಣತೊಡಗಿದ. ಸ್ಲಿಮ್ ಮತ್ತು ಟ್ರಿಮ್ ಆಗಿ ಹೀರೋ ರೀತಿ ಕಾಣಿಸುತ್ತಿದ್ದಾನೆ.
ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬ ಮಾತಿಗೆ ತಕ್ಕಂತೆ ಬದಲಾವಣೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆತ ತನ್ನ ರೂಪಾಂತರವನ್ನು ಪ್ರದಶಿರ್ಸುವ ವಿಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾನೆ. ದಪ್ಪ ಹೊಟ್ಟೆಯ ಕಾರಣಕ್ಕೆ ದೂರತಳ್ಳಿದ ಗೆಳತಿ ಈಗ ತನ್ನ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುತ್ತಿರಬಹುದು ಎಂಬುದು ಖಚಿತವಾಗಿದೆ.