ಉದ್ದದ ಗಡ್ಡ, ದೊಡ್ಡ ಮೀಸೆ ಈಗ ಫ್ಯಾಷನ್. ಮುಖದ ಮೇಲಿನ ಕೂದಲು ಹಾರ್ಮೋನ್ ಬದಲಾವಣೆ, ಅನುವಂಶಿಕ ಮತ್ತು ಅವರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಮೀಸೆ ಚಿಗುರಿದ ಹುಡುಗನನ್ನು ಹುಡುಗಿಯರು ಕಣ್ಣು ಮಿಟುಕಿಸದೆ ನೋಡ್ತಾರೆ. ಎಲ್ಲರನ್ನು ಆಕರ್ಷಿಸಲು ಚೆಂದದ, ಆಕರ್ಷಕ ಮೀಸೆ, ಗಡ್ಡ ಬಿಡಲು ಹುಡುಗ್ರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ನೀವೂ ದಟ್ಟವಾದ ಗಡ್ಡವನ್ನು ಬಯಸಿದರೆ, ಈ ವಿಧಾನಗಳನ್ನು ಅನುಸರಿಸಿ.
ನೆಲ್ಲಿಕಾಯಿ ಎಣ್ಣೆಯಿಂದ ದೈನಂದಿನ 15 ನಿಮಿಷಗಳ ಕಾಲ ಗಡ್ಡಕ್ಕೆ ಮಸಾಜ್ ಮಾಡಿ. ತಣ್ಣನೆಯ ನೀರಿನಿಂದ ತೊಳೆಯಿರಿ.
ದಾಲ್ಚಿನ್ನಿ ಪುಡಿಗೆ ಸ್ವಲ್ಪ ನಿಂಬೆ ರಸ ಹಾಕಿ ಮತ್ತು ಗಡ್ಡದ ಮೇಲೆ ಅಪ್ಲಾಯ್ ಮಾಡಿ ಉಜ್ಜಿ. 15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಕೂದಲು ಬೆಳೆಯಲು ಪ್ರಾರಂಭವಾಗುತ್ತದೆ ಮತ್ತು ಚರ್ಮವು ಮೃದುವಾಗುತ್ತದೆ.
ಸಾಸಿವೆ ಎಲೆಗಳನ್ನು ರುಬ್ಬಿ ಅದಕ್ಕೆ ನಿಂಬೆ ರಸವನ್ನು ಸೇರಿಸಿ ಅದನ್ನು 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ. ವಾರಕ್ಕೆ 2-3 ಬಾರಿ ಹೀಗೆ ಮಾಡಿ ಗಡ್ಡಕ್ಕೆ ಹೊಸ ಲುಕ್ ಬರುತ್ತದೆ.
ಬೆಚ್ಚಗಿನ ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಗಡ್ಡದ ಭಾಗಕ್ಕೆ ಹತ್ತು ನಿಮಿಷ ಚೆನ್ನಾಗಿ ಮಸಾಜ್ ಮಾಡಿ.
ಒಂದರಿಂದ ಒಂದೂವರೆ ಇಂಚು ಕೂದಲು ಬೆಳೆದ ನಂತರ ಗಡ್ಡಕ್ಕೆ ಶೇಪ್ ಕೊಟ್ಟರೆ ಚೆನ್ನಾಗಿ ಗಡ್ಡ ಬೆಳೆಯುತ್ತೆ.