
ಕ್ರಿಸಾಲಿಸ್ ಹೈ ಶಾಲೆಯ ಬಸ್ ರಾಂಗ್ ರೂಟಲ್ಲಿ ಬಂದಿದೆ. ಇದನ್ನು ಗಮನಿಸಿದ ಫಿಕ್ಸ್ ಬೆಂಗಳೂರು ಪ್ಲೀಜ್ ಟ್ಟಿಟರ್ ಅಕೌಂಟ್ ವಿಡಿಯೋನ ಪೋಸ್ಟ್ ಮಾಡಿ, “@ChrysalisHigh ಬ್ರಿಗೇಡ್ ಮೆಟ್ರೊಪೊಲಿಸ್‌ನಿಂದ ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದ ಅಡಿಯಲ್ಲಿ ನಿಮ್ಮ ಶಾಲಾ ಬಸ್ಸು ವಿದ್ಯಾರ್ಥಿಗಳನ್ನು ತುಂಬಿಕೊಂಡು ಹಾದುಹೋಗಿದೆ. ಬಸ್ ಸಂಖ್ಯೆ KA53AA6189. ಬೆಂಗಳೂರು ಸಿಟಿ ಪೊಲೀಸರೇ ದಯವಿಟ್ಟು ಕಠಿಣ ದಂಡವನ್ನು ವಿಧಿಸಿ. ಇದು ಶಾಲಾ ಬಸ್ ಆಗಿರುವುದರಿಂದ ಹಲವಾರು ಮಕ್ಕಳ ಜೀವಕ್ಕೆ ಅಪಾಯವನ್ನುಂಟುಮಾಡುವುದು ಸರಿಯಲ್ಲ” ಎಂದು ಟ್ವೀಟ್ ಮಾಡಲಾಗಿದೆ.
ಮತ್ತೊಂದು ಟ್ವೀಟ್‌ನಲ್ಲಿ ಶಾಲಾ ಬಸ್ ಮತ್ತೆ ಅಪಾಯಕಾರಿಯಾಗಿ ಯು-ಟರ್ನ್ ಮಾಡುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಚಾರ ಸಂಚಾರಿ ಪೊಲೀಸರ ಗಮನಕ್ಕೆ ಬಂದ ನಂತರ ಪೊಲೀಸರು ಬಸ್ ಚಾಲಕನಿಗೆ ದಂಡದ ಚಲನ್ ಜಾರಿ ಮಾಡಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರ ಟ್ವಿಟರ್ ನಲ್ಲಿ ದಂಡದ ಚಲನ್ ನೀಡುತ್ತಿರುವ ಫೋಟೋವನ್ನ ಹಂಚಿಕೊಳ್ಳಲಾಗಿದೆ. ಆದರೆ ಅದರಲ್ಲಿ ಚಾಲಕ ಪೋಸ್ ನೀಡಿರುವ ರೀತಿ ಜನರು ಉಲ್ಲಾಸಕರ ರಿಪ್ಲೈ ಮಾಡಲು ಕಾರಣವಾಗಿದೆ.
ದಂಡದ ಚಲನ್ ನ ಬಹುಮಾನದಂತೆ ಸ್ವೀಕರಿಸುತ್ತಿರುವಂತೆ ಚಾಲಕ ಕಂಡಿದ್ದು ನೆಟ್ಟಿಗರು ಇದೆಂಥಾ ಪೋಸ್ ಅಥವಾ ನಡೆ ಎಂದು ಕಮೆಂಟ್ ಮಾಡಿದ್ದಾರೆ.