
ಜನವರಿ 21ರಿಂದ ಫೆಬ್ರವರಿ 19ರ ನಡುವೆ ಈ ಮೊತ್ತದ ದುಪ್ಪಟ್ಟು ಅಂದರೆ 7.5 ಕೋಟಿ ರೂಪಾಯಿಯನ್ನು ಉತ್ತರ ಪ್ರದೇಶದಲ್ಲಿ ಫೇಸ್ಬುಕ್ ಜಾಹೀರಾತಿಗೆ ಬಳಕೆ ಮಾಡಲಾಗಿದೆ.
ಅಂದರೆ ಉತ್ತರ ಪ್ರದೇಶ ಬಿಜೆಪಿಯು ಫೇಸ್ಬುಕ್ ಜಾಹೀರಾತುಗಳಿಗಾಗಿ ಪ್ರತಿದಿನ ಸರಿಸುಮಾರು 10 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.
ಇತ್ತ ಜಾಹೀರಾತುಗಳಿಗೆಂದು ಕಾಂಗ್ರೆಸ್ ಪಕ್ಷವು ಪ್ರತಿದಿನ ಕೇವಲ 21 ಸಾವಿರ ರೂಪಾಯಿ ಖರ್ಚು ಮಾಡುತ್ತಿದೆ ಎಂದು ತಿಳಿದುಬಂದಿದೆ.
ಇನ್ನುಳಿದಂತೆ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕ ದಳವು ಬಿಜೆಪಿಗೆ ಹೋಲಿಕೆ ಮಾಡಿದರೆ ಕಡಿಮೆ ಹಣವನ್ನು ಖರ್ಚು ಮಾಡಿವೆ.
ರಾಜಕೀಯ ಪಕ್ಷ 30 ದಿನಗಳಲ್ಲಿ ಫೇಸ್ಬುಕ್ ಜಾಹಿರಾತಿಗೆ ವ್ಯಯಿಸಿದ ಮೊತ್ತ ಪ್ರತಿದಿನದ ಮೊತ್ತ
ಬಿಜೆಪಿ 3.1 ಕೋಟಿ ರೂಪಾಯಿ 10 ಲಕ್ಷ ರೂಪಾಯಿ
ಸಮಾಜವಾದಿ ಪಕ್ಷ 19 ಲಕ್ಷ ರೂಪಾಯಿ 63 ಸಾವಿರ ರೂಪಾಯಿ
ರಾಷ್ಟ್ರೀಯ ಲೋಕ ದಳ 7.5 ಲಕ್ಷ ರೂಪಾಯಿ 25 ಸಾವಿರ ರೂಪಾಯಿ
ಕಾಂಗ್ರೆಸ್ 6.3 ಲಕ್ಷ ರೂಪಾಯಿ 21 ಸಾವಿರ ರೂಪಾಯಿ