alex Certify ದಂಗಾಗಿಸುವಂತಿದೆ ಪಾಠ ಮಾಡುವ ಶಿಕ್ಷಕರಿಗೆ ಈ ಸರ್ಕಾರ ನೀಡಿರುವ ಹೊಸ ಜವಾಬ್ದಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಪಾಠ ಮಾಡುವ ಶಿಕ್ಷಕರಿಗೆ ಈ ಸರ್ಕಾರ ನೀಡಿರುವ ಹೊಸ ಜವಾಬ್ದಾರಿ…!

ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮದ್ಯ ಸೇವನೆ, ಉತ್ಪಾದನಾ ಘಟಕಗಳು, ಕಳ್ಳಸಾಗಾಣಿಕೆಗಳ ಮೇಲೆ ನಿಗಾ ಇಟ್ಟು, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಬಿಹಾರ ಸರ್ಕಾರ ಸೂಚನೆ ನೀಡಿದೆ.

ಬಿಹಾರ ಸರ್ಕಾರದ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್ ಅವರು ಈ ವಿಷಯವಾಗಿ ಶುಕ್ರವಾರ ಎಲ್ಲಾ ವಲಯಗಳ ಉಪ ನಿರ್ದೇಶಕರು, ಜಿಲ್ಲಾ ಶಿಕ್ಷಣ ಅಧಿಕಾರಿಗಳು ಮತ್ತು ಬಿಹಾರದ ಪ್ರಾಥಮಿಕ, ಮಧ್ಯಮ ಮತ್ತು ಪ್ರೌಢಶಾಲೆಗಳ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಸರ್ಕಾರದ ನಿರ್ದೇಶನದಂತೆ ಪ್ರಾಂಶುಪಾಲರು, ಶಿಕ್ಷಕರು, ಗುತ್ತಿಗೆ ಶಿಕ್ಷಕರು, ಮದರಾಸ ಶಿಕ್ಷಕರು ಮದ್ಯ ಸೇವನೆ, ಉತ್ಪಾದನಾ ಘಟಕಗಳು, ಕಳ್ಳಸಾಗಣೆ, ಮದ್ಯಸಾಗಣೆ ಮತ್ತು ಮಾಫಿಯಾ ಸೇರಿದಂತೆ ಇತರ ಕಾನೂನುಬಾಹಿರ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಟೋಲ್-ಫ್ರೀ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಲು ತಿಳಿಸಿದ್ದೇವೆ.‌ ಶಾಲಾ ಆವರಣದಲ್ಲಿ ಮದ್ಯ ಸೇವಿಸಲು ಯಾವುದೇ ವ್ಯಕ್ತಿಗೆ ಅವಕಾಶ ನೀಡದಂತೆ ನಾವು ಶಿಕ್ಷಕರಿಗೆ ಸೂಚಿಸಿದ್ದೇವೆ. ಮಾಹಿತಿ ನೀಡುವ ಶಿಕ್ಷಕರ ಗುರುತನ್ನು ಸಂಪೂರ್ಣವಾಗಿ ಗೌಪ್ಯವಾಗಿಡುತ್ತೇವೆ ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.

ಏಪ್ರಿಲ್ 2016 ರಲ್ಲಿ ಬಿಹಾರ ರಾಜ್ಯದಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಹೊಸ ನಿಷೇಧ ಕಾನೂನಿನ ಅಡಿಯಲ್ಲಿ, ಮದ್ಯದ ಬಳಕೆ, ತಯಾರಿಕೆ ಮತ್ತು ಸಂಗ್ರಹಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ಇಂತಾ ರಾಜ್ಯದ ನಳಂದ, ಸರನ್ ಮತ್ತು ಬಕ್ಸರ್ ಜಿಲ್ಲೆಗಳಲ್ಲಿ ಕಳೆದ 15 ದಿನಗಳಲ್ಲಿ ಮದ್ಯ ಸಂಬಂಧಿತ ಘಟನೆಗಳು ಹೇರಳವಾಗಿ ನಡೆದಿವೆ‌.

ಹೀಗಾಗಿ ಗ್ರೌಂಡ್ ವರ್ಕ್ ಗೆ ಮುಂದಾಗಿರೊ ಬಿಹಾರ ಸರ್ಕಾರ ಶಿಕ್ಷಕರಿಗೆ ಗುಪ್ತಚರ ಮಾಹಿತಿ ನೀಡುವ ಜವಾಬ್ದಾರಿ ನೀಡಿದೆ. ಜೊತೆಗೆ ಶಾಲೆಗಳ ಪ್ರಾಂಶುಪಾಲರು ಮತ್ತು ಶಿಕ್ಷಕರಲ್ಲದೆ, ಶಿಕ್ಷಾ ಸಮಿತಿ ಸದಸ್ಯರು ಮತ್ತು ಟೋಲಾ ಸೇವಕರು ಕೂಡ ಗುಪ್ತಚರ ಮಾಹಿತಿ ಸಂಗ್ರಹ ತಂಡದ ಭಾಗವಾಗಿರುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...