ಅಸ್ಸಾಂನ ಪ್ರಖ್ಯಾತ ‘ಮನೋಹರಿ ಗೋಲ್ಡ್ ಟೀ’ ತೋಟದ ಚಹಾ ಎಲೆಗಳು ಭಾರಿ ಮೊತ್ತಕ್ಕೆ ಹರಾಜಾಗಿದ್ದು, ಹಳೆಯ ದಾಖಲೆಗಳನ್ನು ಹಿಂದಿಕ್ಕಿದೆ. ಒಂದು ಕಿಲೋ ಗ್ರಾಂ ಚಹಾ ಎಲೆ ಬರೋಬ್ಬರಿ 1.15 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ.
ಹೈದರಾಬಾದ್ ಮೂಲದ ಕೆಫೆ ನಿಲೋಫರ್ ಗಾಗಿ ಅರ್ ಕೆ ಟಿ ಸೇಲ್ಸ್ ಸಂಸ್ಥೆ ಶುಕ್ರವಾರ ನಡೆದ ಹರಾಜಿನಲ್ಲಿ ಈ ಮೊತ್ತವನ್ನು ಕೂಗಿ ತನ್ನಗಾಗಿಸಿಕೊಂಡಿದೆ. ಕಳೆದ ಬಾರಿ ಭಾರತದ ಚಹಾ ಮಂಡಳಿ ಗರಿಷ್ಠ ಹರಾಜು ಮೊತ್ತವನ್ನು ಒಂದು ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಿದ್ದು, ಹೀಗಾಗಿ ಕಿಲೋ ಗ್ರಾಂ ಚಹಾ ಎಲೆ 99,999 ರೂಪಾಯಿಗಳಿಗೆ ಹರಾಜಾಗಿತ್ತು.
ಆದರೆ ಈ ಬಾರಿ ಖಾಸಗಿಯಾಗಿ ಹರಾಜು ಹಾಕಿದ ಕಾರಣ ಈ ಭಾರಿ ಮೊತ್ತ ಲಭಿಸಿದೆ. ಈ ಚಹಾ ಎಲೆಗಳು 24 ಕ್ಯಾರೆಟ್ ಚಿನ್ನದಂತೆ ಕಾಣುತ್ತವಲ್ಲದೆ ಆರೋಗ್ಯಕ್ಕೆ ಪೂರಕವೂ ಹೌದು. ಇದರಲ್ಲಿ ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಹೇರಳವಾಗಿದ್ದು, ಹೀಗಾಗಿ ಇದನ್ನು ಪೈಪೋಟಿ ಮೇಲೆ ಬಿದ್ದು ಖರೀದಿಸಲಾಗುತ್ತದೆ.