ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ರೈಲ್ವೆ ಭಾರಿ ನಷ್ಟವನ್ನು ಅನುಭವಿಸಿದ ಹೊರತಾಗಿಯೂ, ಸೆಂಟ್ರಲ್ ರೈಲ್ವೇ ಟಿಕೆಟ್ ಪರೀಕ್ಷಕರು ಕೇವಲ 11 ತಿಂಗಳಲ್ಲಿ 1 ಕೋಟಿ ರೂ.ಗೂ ಅಧಿಕ ದಂಡವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿಯ ಪ್ರಕಾರ, ಸಾಂಕ್ರಾಮಿಕ ರೋಗದ ನಂತರ ಮೊಹಮ್ಮದ್ ಶಮ್ಸ್ ಚಂದ್ ಎಂಬುವವರು ‘ಒಂದು ಕೋಟಿ ಕ್ಲಬ್’ಗೆ ಸೇರಿದ ಮೊದಲ ಟಿಕೆಟ್ ಪರೀಕ್ಷಕರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ವರದಿ ಪ್ರಕಾರ, ಚಂದ್ ಅವರು ಏಪ್ರಿಲ್ 2021 ಮತ್ತು ಫೆಬ್ರವರಿ 2022 ರ ನಡುವೆ 13,472 ಟಿಕೆಟ್ ರಹಿತ ಪ್ರಯಾಣಿಕರನ್ನು ಕಂಡುಹಿಡಿದು ಒಟ್ಟು 1,06,41,105 ರೂ.ಗಳನ್ನು ದಂಡವಾಗಿ ಸಂಗ್ರಹಿಸಿದ್ದಾರೆ.
ಮೊಹಮ್ಮದ್ ಅವರು 2000ನೇ ಇಸವಿಯಲ್ಲಿ ಕ್ರೀಡಾ ಕೋಟಾದಲ್ಲಿ ಟಿಕೆಟ್ ಪರೀಕ್ಷಕರಾಗಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. 2012 ರವರೆಗೆ ಅವರು ಸೆಂಟ್ರಲ್ ರೈಲ್ವೇಯ ಹಾಕಿ ತಂಡದ ಪ್ರಮುಖ ಸದಸ್ಯರಾಗಿದ್ದರು.
ಸಾಂಕ್ರಾಮಿಕ ಸಮಯದಲ್ಲಿ ಅವರ ಕೆಲಸವು ತುಂಬಾ ಭಯಾನಕವಾಗಿದೆ ಎಂದು ಅವರು ವಿವರಿಸಿದ್ದಾರೆ. ಜನರಿಗೆ ಸೇವೆ ಸಲ್ಲಿಸಲು ಇದು ಉತ್ತಮ ಅವಕಾಶವಾಗಿತ್ತು. ಆದರೆ, ಪ್ರಯಾಣಿಕರೊಂದಿಗೆ ನೇರ ಸಂಪರ್ಕದಲ್ಲಿರುವುದರಿಂದ, ಅಪಾಯ ಕೂಡ ಜಾಸ್ತಿಯೇ ಇತ್ತು ಎಂದು ಹೇಳಿದ್ದಾರೆ.