ಐಶ್ವರ್ಯಾ ರೈ ಬಚ್ಚನ್ ಹಿಂದಿ ಚಿತ್ರಂಗದ ಖ್ಯಾತನಾಮರಲ್ಲಿ ಒಬ್ಬರು. ವಿಶ್ವ ಸುಂದರಿಯಾಗಿ ಮೆರೆದಿದ್ದ ಐಶ್ವರ್ಯಾ ಸಾಕಷ್ಟು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಬಚ್ಚನ್ ಕುಟುಂಬದ ಸೊಸೆ ನೂರಾರು ಕೋಟಿ ಆಸ್ತಿಗೆ ಒಡತಿ. ಐಶ್ವರ್ಯಾ ರೈ ಬಚ್ಚನ್ ಅವರ ಒಟ್ಟಾರೆ ಆಸ್ತಿಯ ಮೌಲ್ಯ ಸುಮಾರು 100 ಮಿಲಿಯನ್ ಡಾಲರ್ ಅಂದ್ರೆ 776 ಕೋಟಿ ರೂಪಾಯಿ.
ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಐಶೂ ಕೂಡ ಒಬ್ಬರು. ಐಶ್ವರ್ಯಾ ಪ್ರತಿ ಚಿತ್ರಕ್ಕೆ 10 ರಿಂದ 12 ಕೋಟಿ ಸಂಭಾವನೆ ಪಡೆಯುತ್ತಾರಂತೆ. ಪಾತ್ರಕ್ಕೆ ಅನುಗುಣವಾಗಿ ಸಂಭಾವನೆ ಮೊತ್ತ ಕೂಡ ಬದಲಾಗುತ್ತಿರುತ್ತದೆ. ಕೇವಲ ಸಿನೆಮಾ ಮತ್ತು ಮಾಡೆಲಿಂಗ್ ಮಾತ್ರವಲ್ಲ, ಉದ್ಯಮದಲ್ಲೂ ಐಶ್ವರ್ಯಾ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಐಶ್ವರ್ಯಾ ಸ್ಟಾರ್ಟಪ್‌ಗಳಲ್ಲಿ ಕೋಟಿಗಟ್ಟಲೆ ಹಣವನ್ನು ಹೂಡಿಕೆ ಮಾಡಿದ್ದಾರೆ. ತಮ್ಮದೇ ಆದ ಹೆಲ್ತ್‌ಕೇರ್ ಸ್ಟಾರ್ಟ್ಅಪ್ ಅನ್ನು ಸಹ ಹೊಂದಿದ್ದಾರೆ.
ಕೆಲವು ವರ್ಷಗಳ ಹಿಂದೆ ಐಶ್ವರ್ಯಾ ರೈ ಮಹಾರಾಷ್ಟ್ರದಲ್ಲಿ ಪವನ ವಿದ್ಯುತ್ ಯೋಜನೆಗೆ ಹಣ ನೀಡಿದ್ದರು. ದೇಶ ವಿದೇಶಗಳಲ್ಲಿ ಬಚ್ಚನ್ ಕುಟುಂಬಕ್ಕೆ ಸೇರಿದ ಆಸ್ತಿಪಾಸ್ತಿಗಳಿವೆ. ಸದ್ಯ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಹಾಗೂ ಐಶ್ವರ್ಯಾ ಮುಂಬೈನ ಜಲ್ಸಾ ಎಂಬ ಬಂಗಲೆಯಲ್ಲಿ ನೆಲೆಸಿದ್ದಾರೆ. ಈ ಬಂಗಲೆಯ ಬೆಲೆ ಸುಮಾರು 112 ಕೋಟಿ ರೂಪಾಯಿ ಅಂತಾ ಅಂದಾಜಿಸಲಾಗ್ತಿದೆ.
ಐಶ್ವರ್ಯಾ ಹಾಗೂ ಅಭಿಷೇಕ್ ದುಬೈನ ಜುಮೇರಾ ಗಾಲ್ಫ್ ಎಸ್ಟೇಟ್‌ನಲ್ಲಿ ಐಷಾರಾಮಿ ವಿಲ್ಲಾ ಹೊಂದಿದ್ದಾರೆ. ಮುಂಬೈನ ಬಿಕೆಸಿ ಪ್ರದೇಶದಲ್ಲಿ ಐಶ್ವರ್ಯಾ 21 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್‌ಗೆ ಒಡತಿ. ಇದಲ್ಲದೆ ಸಾಕಷ್ಟು ಬ್ರಾಂಡ್‌ಗಳಿಗೆ ಅಂಬಾಸಿಡರ್ ಆಗಿದ್ದಾರೆ ಐಶ್ವರ್ಯಾ. ಪ್ರತಿ ವರ್ಷ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ 80 ರಿಂದ 90 ಕೋಟಿ ರೂಪಾಯಿ ಗಳಿಸುತ್ತಾರೆ. ಈ ಜಾಹೀರಾತುಗಳಲ್ಲಿ ನಟಿಸಲು ದಿನಕ್ಕೆ ದಿನಕ್ಕೆ 6-7 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರಂತೆ.
L’Oreal, Longines, LUX, Nakshatra Diamond Jewellery, Titan Watches, Lakme Cosmetics, Philips, Prestige, Pepsi ಮತ್ತು Lodha Group ನಂತಹ ಹಲವು ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಐಶೂ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಸಾಕಷ್ಟು ಐಷಾರಾಮಿ ಕಾರುಗಳು ಕೂಡ ಐಶ್ವರ್ಯಾ ರೈ ಬಳಿಯಿವೆ. 7.95 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್, 1.60 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಎಸ್ 350 ಡಿ ಕೂಪ್, 1.58 ಕೋಟಿ ಮೌಲ್ಯದ ಆಡಿ ಎ 8 ಎಲ್, ಲೆಕ್ಸಸ್ ಎಲ್ಎಕ್ಸ್ 570 ಮತ್ತು ಮರ್ಸಿಡಿಸ್ ಬೆಂಜ್ ಎಸ್ 500 ಕಾರುಗಳು ಇವರ ಬಳಿಯಿವೆ.