alex Certify ಥೈರಾಯ್ಡ್ ಸಮಸ್ಯೆಯುಳ್ಳವರು ಈ ʼಆಹಾರʼದಿಂದ ದೂರವಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ಸಮಸ್ಯೆಯುಳ್ಳವರು ಈ ʼಆಹಾರʼದಿಂದ ದೂರವಿರಿ

ದೇಶದ ಪ್ರತಿ 10 ವ್ಯಕ್ತಿಗಳಲ್ಲಿ ಒಬ್ಬರಿಗೆ ಥೈರಾಯ್ಡ್ ಸಮಸ್ಯೆ ಕಾಡುತ್ತಿದೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಈ ಥೈರಾಯ್ಡ್ ಗೆ ಬಲಿಪಶುಗಳಾಗುತ್ತಿದ್ದಾರೆ.

ಈ ಖಾಯಿಲೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲದಿರುವುದು ಹಾಗೂ ಜಾಗೃತೆಯ ಕೊರತೆಯಿಂದಾಗಿ ಥೈರಾಯ್ಡ್ ಕಾಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.  ಥೈರಾಯ್ಡ್ ಸಮಸ್ಯೆಯಿಂದ ಅಸ್ತಮಾ, ಕೊಲೆಸ್ಟ್ರಾಲ್ ಸಮಸ್ಯೆ, ಖಿನ್ನತೆ, ಮಧುಮೇಹ, ನಿದ್ರಾಹೀನತೆ, ಹೃದಯ ಸಂಬಂಧ ಖಾಯಿಲೆಗಳು ಕಾಡುವ ಸಾಧ್ಯತೆಗಳಿರುತ್ತವೆ.

ವೈದ್ಯರ ಪ್ರಕಾರ ಕೆಲವೊಂದು ಆಹಾರಗಳನ್ನು ಸೇವನೆ ಮಾಡುವುದರಿಂದ ಥೈರಾಯ್ಡ್ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಥೈರಾಯ್ಡ್ ಸಮಸ್ಯೆಯಿಂದ ಬಳಲುವ ರೋಗಿಗಳ ಜೊತೆ ಸಾಮಾನ್ಯರು ಕೂಡ ಥೈರಾಯ್ಡ್ ನಿಂದ ತಪ್ಪಿಸಿಕೊಳ್ಳಲು ಈ ಆಹಾರದಿಂದ ದೂರವಿರುವುದು ಒಳಿತು.

ಅಯೋಡಿನ್ ಯುಕ್ತ ಆಹಾರ : ಥೈರಾಯ್ಡ್ ನಿಂದ ಬಳಲುವವರು ಅಯೋಡಿನ್ ಯುಕ್ತ ಆಹಾರದಿಂದ ದೂರವಿರುವುದು ಒಳ್ಳೆಯದು. ಅಯೋಡಿನ್, ಥೈರಾಯ್ಡ್ ಹಾರ್ಮೋನುಗಳನ್ನು ವೃದ್ಧಿಸುತ್ತದೆ.

ಕೆಫೀನ್ : ಇದು ನೇರವಾಗಿ ಥೈರಾಯ್ಡ್ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ರೆ ಅಸ್ವಸ್ಥತೆ ಹೆಚ್ಚು ಮಾಡುತ್ತದೆ. ನಿದ್ರಾಹೀನತೆಯನ್ನು ಕೆಫೀನ್ ಹೆಚ್ಚು ಮಾಡುತ್ತದೆ.

ರೆಡ್ ಮೀಟ್ : ರೆಡ್ ಮೀಟ್ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ. ಇದು ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. ಥೈರಾಯ್ಡ್ ನಿಂದ ಬಳಲುವವರ ತೂಕ ಸಾಮಾನ್ಯವಾಗಿ ಹೆಚ್ಚಳವಾಗುತ್ತದೆ. ರೆಡ್ ಮೀಟ್ ಸೇವನೆ ಮಾಡಿದ್ರೆ ತೂಕ ಏರಿಕೆ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ.

ಮದ್ಯ : ಬಿಯರ್ ದೇಹದ ಶಕ್ತಿಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಥೈರಾಯ್ಡ್ ನಿಂದ ಬಳಲುವ ಜನರಿಗೆ ಇದ್ರಿಂದ ನಿದ್ರಾಹೀನತೆಯುಂಟಾಗುತ್ತದೆ. ಇದ್ರ ಜೊತೆಗೆ ಆಸ್ಟಿಯೊಪೊರೋಸಿಸ್ ಅಪಾಯ ಕೂಡ ಹೆಚ್ಚಿರುತ್ತದೆ.

ವನಸ್ಪತಿ ತುಪ್ಪ : ಇದ್ರಲ್ಲಿ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಿದ್ದು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುತ್ತದೆ. ಥೈರಾಯ್ಡ್ ನಿಂದ ಕಾಡುವ ಸಮಸ್ಯೆ ಇದ್ರಿಂದ ಹೆಚ್ಚಾಗುತ್ತದೆ. ಈ ತುಪ್ಪವನ್ನು ಸಾಮಾನ್ಯವಾಗಿ ಹೊರಗಿನ ತಿಂಡಿ ತಯಾರಿಸಲು ಬಳಸ್ತಾರೆ. ಹಾಗಾಗಿ ಹೊರಗಿನ ತಿಂಡಿ ತಿನ್ನುವುದನ್ನು ಕಡಿಮೆ ಮಾಡುವುದು ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...