ಪ್ರಸ್ತುತ ದಿನಮಾನಗಳಲ್ಲಿ ಬಹುತೇಕರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ನಿಯಂತ್ರಣಕ್ಕಾಗಿ ಪ್ರತಿದಿನ ಮಾತ್ರೆ ಸೇವಿಸುವುದು ಅಗತ್ಯವಾಗಿದ್ದು, ಸಮಸ್ಯೆ ಉಲ್ಬಣಿಸಿದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆ. ಇದರ ಮಧ್ಯೆ ಕೃಷಿ ವಿಜ್ಞಾನಿಗಳು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.
ಹೌದು, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಹೊಸತಳಿಯ ‘ಅರ್ಕಾ ನಿಖಿತಾ’ ಎಂಬ ಹೆಸರಿನ ಹೈಬ್ರಿಡ್ ಬೆಂಡೆಕಾಯಿ, ಥೈರಾಯ್ಡ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ ಎಂದು ಹೇಳಲಾಗಿದೆ. ಇದನ್ನು ಈಗ ಹೆಸರಘಟ್ಟದ ಐ ಐ ಹೆಚ್ ಆರ್ ಆವರಣದಲ್ಲಿನ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ.
100 ಗ್ರಾಂ ಒಣಗಿದ ಈ ಹೈಬ್ರಿಡ್ ಬೆಂಡೆಕಾಯಿಯಲ್ಲಿ 32 ಮೈಕ್ರೋ ಗ್ರಾಮಿನಷ್ಟು ಅಯೋಡೀನ್ ಅಂಶವಿರುತ್ತದೆ ಎಂದು ಹೇಳಲಾಗಿದ್ದು, ಜೊತೆಗೆ ಹೇರಳವಾದ ನಾರಿನಂಶ ಹೊಂದಿದೆ. ಅಲ್ಲದೆ ಕೆಂಪು ರಕ್ತಕಣ ವೃದ್ಧಿಸುವ ಗುಣವನ್ನು ಇದು ಹೊಂದಿದ್ದು, ನೆನಪಿನ ಶಕ್ತಿ ಹಾಗೂ ಕ್ಯಾನ್ಸರ್ ನಿಯಂತ್ರಣಕ್ಕೂ ಸಹಕಾರಿ ಎನ್ನಲಾಗಿದೆ.