ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗ್ತಿದೆ. ಜನರಿಗೆ ಇದರ ಕಾರಣ ಮತ್ತು ಚಿಕಿತ್ಸೆ ತಿಳಿದಿಲ್ಲ. ಮನೆ ಮದ್ದಿನ ಮೂಲಕ ಥೈರಾಯ್ಡ್ ಬರದಂತೆ ತಡೆಯಬಹುದು.
ಥೈರಾಯ್ಡ್ ಗೆ ಹಲಸಿನ ಹಣ್ಣು ಒಳ್ಳೆಯ ಮದ್ದು. ಹಲಸಿನ ಹಣ್ಣು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾರ್ಮೋನುಗಳನ್ನು ತಯಾರಿಸಲು ಮತ್ತು ಹೀರಿಕೊಳ್ಳಲು ಹಲಸಿನ ಹಣ್ಣು ಸಹಾಯ ಮಾಡುತ್ತದೆ. ಥೈರಾಯ್ಡ್ ನಿಂದ ಬಳಲುವವರು ಹಲಸಿನ ಹಣ್ಣಿನ ಸೇವನೆ ಮಾಡಬೇಕು.
ಥೈರಾಯ್ಡ್ ನಿಯಂತ್ರಣಕ್ಕೆ ಶುಂಠಿ ಕೂಡ ಒಳ್ಳೆಯದು. ಶುಂಠಿಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಇದ್ದು, ಇದು ಥೈರಾಯ್ಡ್ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಅಯೋಡಿನ್ ಯುಕ್ತ ಆಹಾರ ಸೇವಿಸುವ ಮೂಲಕ ಥೈರಾಯ್ಡ್ ನಿಯಂತ್ರಿಸಬಹುದು, ದೈನಂದಿನ ಆಹಾರದಲ್ಲಿ ಸಮುದ್ರ ಆಹಾರಗಳು, ಎಲೆಕೋಸು, ಕ್ಯಾರೆಟ್ ಮುಂತಾದವುಗಳನ್ನು ತಿನ್ನುವುದು ಒಳ್ಳೆಯದು.
ಥೈರಾಯ್ಡ್ ಸಮಸ್ಯೆಗಳಿಂದ ಹೊರಬರಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೋರೆಕಾಯಿ ರಸವನ್ನು ಕುಡಿಯುವ ಅಭ್ಯಾಸವನ್ನು ಮಾಡಿ. ಸೋರೆಕಾಯಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ ನಂತ್ರ ಅರ್ಧ ಗಂಟೆ ಏನನ್ನೂ ತಿನ್ನಬೇಡಿ. ಕುಡಿಯಬೇಡಿ.