ಥೈರಾಯಿಡ್ ಸಮಸ್ಯೆ ಈಗ ಮಹಿಳೆಯರಲ್ಲಿ ಮಾಮೂಲಾಗಿ ಬಿಟ್ಟಿದೆ. ಥೈರಾಯಿಡ್ ಸಮಸ್ಯೆಗೆ ಚಿಕಿತ್ಸೆಗಳು ಇದ್ದರೂ ಯೋಗ, ಧ್ಯಾನದಿಂದ ಒಳ್ಳೆಯ ಫಲಿತಾಂಶ ದೊರಕುತ್ತದೆ. ಜೊತೆಗೆ ಕಾರ್ಬೊಹೈಡ್ರೇಟ್, ನಾರು ಹೆಚ್ಚಾಗಿರುವ ಪದಾರ್ಥಗಳು, ತಾಜಾ ಹಣ್ಣುಗಳು, ಸೊಪ್ಪುಗಳನ್ನು ಆಹಾರದಲ್ಲಿ ತೆಗೆದುಕೊಳ್ಳಬೇಕು. ಈ ಜಾಗ್ರತೆಗಳೊಂದಿಗೆ ಕೆಲವು ಆಸನಗಳು ಥೈರಾಯಿಡ್ ಸಮಸ್ಯೆಯನ್ನು ನಿವಾರಿಸುತ್ತವೆ. ಅವು ಯಾವುವು ತಿಳಿಯಬೇಕಾ.
ಸೇತುಬಂಧನಾಸನ
ಮೊದಲು ನೇರವಾಗಿ ಮಲಗಿ ಮೊಣಕಾಲುಗಳನ್ನು ಮಡಚಿ ಕೈಗಳಿಂದ ಹಿಮ್ಮಡಿಗಳನ್ನು ಇಟ್ಟುಕೊಳ್ಳಬೇಕು. ಈಗ ನಿಧಾನವಾಗಿ ಶ್ವಾಸವನ್ನು ತೆಗೆದುಕೊಳ್ಳುತ್ತಾ ಸಾಧ್ಯವಾದಷ್ಟು ಸೊಂಟದ ಭಾಗವನ್ನು ಮೇಲಕ್ಕೆತ್ತಿ ಸೇತುವೆ ಆಕಾರ ಬರುವ ಹಾಗೆ ಮಾಡಬೇಕು. ಇದು ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಸೊಂಟ, ಸ್ನಾಯುಗಳು ದೃಢವಾಗುವುದರೊಂದಿಗೆ ಜೀರ್ಣಕ್ರಿಯೆಯ ಮಟ್ಟ ಮೆರುಗುಗೊಳಿಸುತ್ತದೆ.
ಮರ್ಜರಿ ಆಸನ
ವಜ್ರಾಸನ ಮಾಡಿ ಮೊಣಕಾಲಿನ ಮೇಲೆ ನಿಂತುಕೊಳ್ಳಬೇಕು. ನಿಧಾನವಾಗಿ ಕೈಗಳನ್ನು ನೆಲದ ಮೇಲಿಟ್ಟು ಮುಂದಕ್ಕೆ ಬಾಗುತ್ತಾ ಮೊಣ ಕೈ ಕಾಲುಗಳ ಮೇಲೆ ಶರೀರದ ತೂಕವನ್ನು ಬಿಡಬೇಕು. ಈ ಆಸನಗಳನ್ನು ಮಾಡುವಾಗ ಹೊಟ್ಟೆಯ ಮೇಲೆ ದೃಷ್ಟಿಯನ್ನು ಹರಿಸಬೇಕು. ನಂತರ ವಜ್ರಾಸನಕ್ಕೆ ಬಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು.
ಉಷ್ಟ್ರಾಸನ
ವಜ್ರಾಸನದಲ್ಲಿ ಕುಳಿತು ಮೊಣಕಾಲಿನ ಮೇಲೆ ನಿಲ್ಲಬೇಕು. ಕೈಗಳನ್ನು ಸೊಂಟದ ಮೇಲೆ ಇಟ್ಟು ನಿಧಾನವಾಗಿ ಶ್ವಾಸ ತೆಗೆದುಕೊಳ್ಳುತ್ತಾ ಬೆನ್ನು ಮೂಳೆಯನ್ನು ಹಿಂದಕ್ಕೆ ಬಾಗಿಸಿ ತಲೆಯನ್ನು ಸಾಧ್ಯವಾದಷ್ಟು ಹಿಂದಕ್ಕೆ ತೆಗೆದುಕೊಳ್ಳಬೇಕು. ಇದನ್ನು ಉಷ್ಟ್ರಾಸನ ಎನ್ನಲಾಗುತ್ತದೆ. ಬೆನ್ನು, ಕುತ್ತಿಗೆ ಸ್ನಾಯುಗಳು ದೃಢಪಡಿಸುವುದಷ್ಟೇ ಅಲ್ಲ, ತಲೆ, ಎದೆಯಲ್ಲಿ ರಕ್ತ ಸರಬರಾಜು ಹೆಚ್ಚಾಗುವುದಕ್ಕೆ ಥೈರಾಯಿಡ್ ಗ್ರಂಥಿಯ ಕೆಲಸದ ಸಾಮರ್ಥ್ಯಕ್ಕೆ ಈ ಆಸನ ಉಪಯೋಗವಾಗುತ್ತದೆ.