ಥಾಯ್ಲೆಂಡ್ ಕರಾವಳಿಯಲ್ಲಿ ತೈಲ ರಿಗ್ ಕಾರ್ಮಿಕರು ಮಧ್ಯರಾತ್ರಿಯಲ್ಲಿ ಚೀನಾದ ಪ್ರೇತ ಹಡಗು ತೇಲುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ.
ವರದಿಗಳ ಪ್ರಕಾರ, ಚೀನಾ ಭಾಷೆಯಲ್ಲಿ ಜಿನ್ ಶೂಯಿ ಯುವಾನ್ 2 ಎಂದು ಲೇಬಲ್ ಮಾಡಲಾದ ಹಡಗನ್ನು, ಜನವರಿ 6 ರಂದು ಥಾಯ್ಲೆಂಡ್ ಕೊಲ್ಲಿಯಲ್ಲಿ ಚೆವ್ರಾನ್ ತೈಲ ರಿಗ್ ಕಾರ್ಮಿಕರು ಗುರುತಿಸಿದ್ದಾರೆ.
ವಿಚಿತ್ರವೆಂದರೆ, ಹಡಗಿನಲ್ಲಿ ಯಾವುದೇ ಸರಕು ಅಥವಾ ದಾಖಲೆಗಳು ಇರಲಿಲ್ಲ. ಆನ್ಲೈನ್ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಇತರ ಹಡಗುಗಳ ಸಿಬ್ಬಂದಿ ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಹಡಗು ತೇಲುತ್ತಿರುವುದನ್ನು ನೋಡಬಹುದು. ಇನ್ನು ಹಡಗಿನ ತೈಲ ಸೋರಿಕೆಯಿಂದ ಪರಿಸರಕ್ಕೆ ಹಾನಿಯಾಗದಂತೆ ತಡೆಯಲು ಸ್ಥಳೀಯ ಅಧಿಕಾರಿಗಳು ಥಾಯ್ ನೌಕಾಪಡೆಯೊಂದಿಗೆ ಸೇರಿ ಹಡಗನ್ನು ತೀರಕ್ಕೆ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ, ಕೆಳಕ್ಕೆ ಎಳೆಯಲ್ಪಟ್ಟಾಗ ಭಾರಿ ಗಾಳಿ ಬೀಸಿದ ಪರಿಣಾಮ ಹಡಗು ನೀರಿನಲ್ಲಿ ಮುಳುಗಿದೆ.
ಮುಳುಗಡೆಯಾದ ಪ್ರದೇಶವನ್ನು ಗುರುತಿಸಲು ಬೋಯ್ ಗಳನ್ನು ಸ್ಥಾಪಿಸಲಾಗಿದೆ. ಮೀನುಗಾರರು ನೌಕಾಯಾನ ಮಾಡುವಾಗ ಜಾಗರೂಕರಾಗಿರಲು ಕೋರಲಾಗಿದೆ. ಹಡಗು ಮುಳುಗಿದ ಸ್ಥಳದಲ್ಲಿ ದೋಣಿಯನ್ನು ನಿಯೋಜಿಸಲಾಗಿದೆ. ಹಡಗು ನೀರಿನ ಮೇಲ್ಮೈಯಿಂದ ಸುಮಾರು 18 ಮೀಟರ್ ಮತ್ತು ಸಿಚೋನ್ ಜಿಲ್ಲೆಯ ಕರಾವಳಿಯಿಂದ ಸುಮಾರು 28 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ ಎನ್ನಲಾಗಿದೆ.
ಇನ್ನು ಈ ಹಡಗಿನ ಕುರಿತು ಹೇಳುವುದಾದರೆ, 2020 ರ ಆರಂಭದಲ್ಲಿ ಡೆನ್ನಿಸ್ ಚಂಡಮಾರುತದ ನಂತರ ಐರ್ಲೆಂಡ್ ಕರಾವಳಿಯಲ್ಲಿ ಕೊಚ್ಚಿಕೊಂಡು ಹೋಗಿತ್ತು. ಚೀನಾದಿಂದ ಕೈ ಬಿಡಲಾಗಿರುವ ಈ ಹಡಗು ಒಂದು ವರ್ಷಕ್ಕೂ ಹೆಚ್ಚು ಕಾಲ ತೇಲುತ್ತಿತ್ತು.