ಬೇಕಾಗುವ ಸಾಮಗ್ರಿ :
ಕಡ್ಲೆ ಹಿಟ್ಟು – 100 ಗ್ರಾಂ, ಅರಿಶಿಣ, ಖಾರದ ಪುಡಿ, ಜೀರಿಗೆ ಪುಡಿ – ತಲಾ 1/2 ಚಮಚ, ಮೆಣಸಿನ ಕಾಯಿ – 5, ನಿಂಬು – 1 ಹೋಳು, ಎಣ್ಣೆ – 1 ಕಪ್, ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಒಂದು ಬೌಲ್ನಲ್ಲಿ ಕಡ್ಲೆ ಹಿಟ್ಟು, ಅರಿಶಿಣ, ಖಾರದಪುರಿ, ಜೀರಿಗೆ ಪುಡಿ, ಉಪ್ಪು ಚೆನ್ನಾಗಿ ಕಲಸಿಕೊಳ್ಳಿ. ಈಗ ನೀರನ್ನ ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. ಇದೀಗ ಕಾದ ಎಣ್ಣೆಗೆ ಮಿಶ್ರಣದಲ್ಲಿ ಮೆಣಸನ್ನ ಅದ್ದಿ ಕರಿಯಿರಿ. ಇದೀಗ ನಿಮ್ಮ ಕ್ರಿಸ್ಪಿ ಮೆಣಸಿನ ಬಜ್ಜಿ ಸವಿಯಲು ಸಿದ್ಧ.