2 ಕಪ್ ಬೇಯಿಸಿದ ಆಲೂಗಡ್ಡೆ (ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ), 1 ಟೇಬಲ್ ಸ್ಪೂನ್ – ಎಣ್ಣೆ, 1 ಟೀ ಸ್ಪೂನ್ – ಜೀರಿಗೆ, 4 ಎಸಳು – ಕರಿಬೇವು, ¼ ಟೀ ಸ್ಪೂನ್ – ಅರಿಶಿನ, 1 ಟೀ ಸ್ಪೂನ್ – ಖಾರದ ಪುಡಿ, 1 ½ ಟೀ ಸ್ಪೂನ್ – ಧನಿಯಾ ಪುಡಿ, 1 ಟೇಬಲ್ ಸ್ಪೂನ್ – ಸಕ್ಕರೆ, 2 ಟೀ ಸ್ಪೂನ್ – ಲಿಂಬೆಹಣ್ಣಿನ ರಸ, ಉಪ್ಪು – ರುಚಿಗೆ ತಕ್ಕಷ್ಟು, 2 ಟೇಬಲ್ ಸ್ಪೂನ್- ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಮೊದಲು ಎಣ್ಣೆ ಹಾಕಿ ನಂತರ ಜೀರಿಗೆ, ಕರಿಬೇವು ಸೇರಿಸಿ. ನಂತರ ಇದಕ್ಕೆ ಬೇಯಿಸಿ ಕತ್ತರಿಸಿಟ್ಟುಕೊಂಡ ಆಲೂಗಡ್ಡೆ ಹಾಕಿ ಅರಿಶಿನ ಪುಡಿ ಸೇರಿಸಿ ನಿಧಾನಕ್ಕೆ ಮಿಕ್ಸ್ ಮಾಡಿ.
ಇದಕ್ಕೆ ಧನಿಯಾ ಪುಡಿ, ಸಕ್ಕರೆ, ಲಿಂಬೆಹಣ್ಣಿನ ರಸ, ಉಪ್ಪು, ಖಾರದ ಪುಡಿ ಕೊತ್ತಂಬರಿ ಸೊಪ್ಪುಸೇರಿಸಿ ಮಿಕ್ಸ್ ಮಾಡಿ 3 ನಿಮಿಷಗಳ ಕಾಲ ಬೇಯಿಸಿಕೊಂಡರೆ ರುಚಿಕರವಾದ ಆಲೂಗಡ್ಡೆ ಪಲ್ಯ ರೆಡಿ.