ಕೆಲವರಿಗೆ ರಸಂ, ಸಾಂಬಾರು ಇದ್ದರೂ ಪಲ್ಯ ಬೇಕೇ ಬೇಕು. ಅಂತಹವರಿಗೆ ಇಲ್ಲಿ ಫಟಾಪಟ್ ಆಗಿ ಬಾಳೆಕಾಯಿಯ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ½ ಕಪ್ ಬಾಳೆಕಾಯಿ ಪೀಸ್ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, 1 ½ ಟೇಬಲ್ ಸ್ಪೂನ್ – ಎಣ್ಣೆ, 1 ಟೀ ಸ್ಪೂನ್ – ಸಾಸಿವೆ, ¼ ಟೀ ಸ್ಪೂನ್ – ಇಂಗು, 1 ಟೀ ಸ್ಪೂನ್ – ಖಾರದಪುಡಿ, ¼ ಟೀ ಸ್ಪೂನ್ – ಅರಿಶಿನ, 1 ಟೀ ಸ್ಪೂನ್ – ಕೊತ್ತಂಬರಿ – ಜೀರಿಗೆ ಪುಡಿ, 1 ಟೀ ಸ್ಪೂನ್ – ಸಕ್ಕರೆ, 2 ಟೇಬಲ್ ಸ್ಪೂನ್ – ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು-ಉಪ್ಪು.
ಮಾಡುವ ವಿಧಾನ:
ಮೊದಲಿಗೆ ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಸಾಸಿವೆ ಹಾಕಿ ಅದು ಸಿಡಿಯುತ್ತಲೇ ಇಂಗು ಹಾಕಿ 30 ಸೆಕೆಂಡುಗಳ ಕಾಲ ಹುರಿಯಿರಿ. ನಂತರ ಬಾಳೆಕಾಯಿ ಪೀಸ್ ಇದಕ್ಕೆ ಸೇರಿಸಿ ಸ್ವಲ್ಪ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಲು ಇಡಿ.
ನಂತರ 3 ಟೇಬಲ್ ಸ್ಪೂನ್ ನೀರು ಸೇರಿಸಿ ಒಂದು ಮುಚ್ಚಳ ಮುಚ್ಚಿ ಬೇಯಿಸಿ. ನಂತರ ಇದಕ್ಕೆ ಖಾರದಪುಡಿ, ಅರಿಶಿನ, ಕೊತ್ತಂಬರಿ, ಜೀರಿಗೆ ಪುಡಿ, ಸ್ವಲ್ಪ ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಬೇಯಿಸಿಕೊಂಡು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.