alex Certify ಥಟ್ಟಂತ ರೆಡಿಯಾಗುತ್ತೆ ಬಾಯಲ್ಲಿ ನೀರೂರಿಸುವ ‘ಚಿಕನ್ 65’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ರೆಡಿಯಾಗುತ್ತೆ ಬಾಯಲ್ಲಿ ನೀರೂರಿಸುವ ‘ಚಿಕನ್ 65’

ಚಿಕನ್ ಎಂದರೆ ಮಾಂಸಹಾರ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಒಳ್ಳೆಯ ಬಿರಿಯಾನಿ ಮಾಡಿದ ಮೇಲೆ ಸೈಡ್ ಡಿಶ್ ಆಗಿ ಚಿಕನ್ 65 ಮಾಡಿದರೆ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ರುಚಿಕರವಾದ ಚಿಕನ್ 65 ಅನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. ನೀವು ಮನೆಯಲ್ಲಿ ಮಾಡಿಕೊಂಡು ತಿನ್ನಿ.

ಚಿಕನ್ -20 ಪೀಸ್, 1 ಟೇಬಲ್ ಚಮಚ-ಖಾರದಪುಡಿ, 1 ಟೀ ಸ್ಪೂನ್-ಅರಿಶಿನಪುಡಿ, 1 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಟೀ ಸ್ಪೂನ್-ಗರಂ ಮಸಾಲ, ಲಿಂಬೆ ಹಣ್ಣಿಸ ರಸ-1 ಚಮಚ, 1-ಟೇಬಲ್ ಸ್ಪೂನ್-ಅಕ್ಕಿ ಹಿಟ್ಟು, 1 ಟೇಬಲ್ ಸ್ಪೂನ್-ಕಾರ್ನ್ ಫ್ಲೋರ್, 1-ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ-ಕರಿಯಲು.

ಮೊದಲಿಗೆ ಒಂದು ದೊಡ್ಡ ಬೌಲ್ ತೆಗೆದುಕೊಂಡು ಅದಕ್ಕೆ ಖಾರದಪುಡಿ, ಅರಿಶಿನ ಪುಡಿ, ಗರಂ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಲಿಂಬೆ ಹಣ್ಣಿನ ರಸ, ಮೊಟ್ಟೆ, ಅಕ್ಕಿಹಿಟ್ಟು, ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಕೋಳಿ ಪೀಸ್ ಗಳನ್ನು ಹಾಕಿ ಮಿಶ್ರಣ ಮಾಡಿ 1 ಗಂಟೆ ಮ್ಯಾರಿನೇಟ್ ಮಾಡುವುದಕ್ಕೆ ಇಟ್ಟು ಬಿಡಿ.

ನಂತರ ಗ್ಯಾಸ್ ಮೇಲೆ ಎಣ್ಣೆ ಬಾಣಲೆಯಲ್ಲಿಟ್ಟು ಅದಕ್ಕೆ ಮ್ಯಾರಿನೇಟ್ ಮಾಡಿಟ್ಟುಕೊಂಡ ಚಿಕನ್ ಪೀಸ್ ಗಳನ್ನು ಹಾಕಿ ಚೆನ್ನಾಗಿ ಕರಿಯಿರಿ. ನಂತರ ಕತ್ತರಿಸಿದ ಈರುಳ್ಳಿ ಹಾಗೂ ಲಿಂಬೆ ಹಣ್ಣಿನ ಹೋಳುಗಳ ಜತೆ ಸರ್ವ್ ಮಾಡಿದರೆ ಚಿಕನ್ 65 ರೆಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...