ದಿನಾ ಸಾಂಬಾರು, ಸಾರು ತಿಂದು ಬೇಜಾರಾದವರು ಒಮ್ಮೆ ಈ ಬಟಾಣಿ ಪುಲಾವ್ ಮಾಡಿ ನೋಡಿ. ಇದನ್ನು ಮಾಡುವುದು ತುಂಬಾ ಸುಲಭ ಜತೆಗೆ ರುಚಿಕರವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಹಸಿ ಬಟಾಣಿ-1 ಕಪ್, ತುಪ್ಪ-1/2 ಚಮಚ, ಎಣ್ಣೆ-3 ಚಮಚ, ಈರುಳ್ಳಿ-2, ಸೀಳಿದ ಹಸಿಮೆಣಸು-2, ಶುಂಠಿ, ಬೆಳ್ಳುಳ್ಳಿ ಪೇಸ್ಟ್-1 ಚಮಚ, ಟೊಮೆಟೊ-2, ಪುದೀನಾ-1/4 ಕಪ್, ಕೊತ್ತಂಬರಿ ಸೊಪ್ಪು-1/4 ಕಪ್, ನೀರು-3 ಕಪ್, ಉಪ್ಪು-1 ಚಮಚ, ಅಕ್ಕಿ-2 ಕಪ್ (1/2 ಗಂಟೆ ನೀರಿನಲ್ಲಿ ನೆನೆಸಿಟ್ಟಿದ್ದು). ಗೋಡಂಬಿ-1/2 ಕಪ್, ಜೀರಿಗೆ-1 ಚಮಚ, ಚಕ್ಕೆ-1 ಇಂಚು, ಏಲಕ್ಕಿ-2, ಲವಂಗ-4, ಪಲಾವ್ ಎಲೆ-1.
ಮಾಡುವ ವಿಧಾನ:
ಮೊದಲಿಗೆ ಕುಕ್ಕರ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದು ಬಿಸಿಯಾಗುತ್ತಲೆ ಗೋಡಂಬಿ, ಜೀರಿಗೆ, ಏಲಕ್ಕಿ, ಲವಂಗ, ಪಲಾವ್ ಎಲೆ ಹಾಕಿ ಫ್ರೈ ಮಾಡಿ, ನಂತರ ಕತ್ತರಿಸಿದ ಈರುಳ್ಳಿ, ಹಸಿಮೆಣಸು ಹಾಕಿ ಫ್ರೈ ಮಾಡಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
ನಂತರ ಕತ್ತರಿಸಿದ ಟೊಮೆಟೊ ಸೇರಿಸಿ ಪುದೀನಾ, ಕೊತ್ತಂಬರಿ ಸೊಪ್ಪು, ಹಸಿ ಬಟಾಣಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅಕ್ಕಿ ಸೇರಿಸಿ 3 ಕಪ್ ನೀರು, ಉಪ್ಪು ಹಾಕಿ 2 ವಿಷಲ್ ಕೂಗಿಸಿಕೊಂಡರೆ ರುಚಿಕರವಾದ ಪಲಾವ್ ರೆಡಿ.