ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೆಚ್ಚಿದ್ದು. ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆಲ್ಲಿಕಾಯಿಯಿಂದ ರುಚಿಕರವಾದ ಚಟ್ನಿ ಮಾಡುವ ವಿಧಾನ ಇಲ್ಲಿದೆ ನೋಡಿ. ದೋಸೆ, ರೊಟ್ಟಿ, ಅನ್ನದ ಜತೆ ಇದು ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ನೆಲ್ಲಿಕಾಯಿ- 1 ಕಪ್ ಸಣ್ಣಗೆ ಹಚ್ಚಿಟ್ಟುಕೊಂಡಿದ್ದು, 7- ಹಸಿಮೆಣಸು, ಬೆಳ್ಳುಳ್ಳಿ- 10 ಎಸಳು, ಅರಿಶಿನ- 1/4 ಟೀ ಸ್ಪೂನ್, ¼ ಕಪ್ – ಶೇಂಗಾ ಬೀಜ, ಸ್ವಲ್ಪ ಬೆಲ್ಲ, ಜೀರಿಗೆ- 1/4 ಟೀ ಸ್ಪೂನ್, ಎಣ್ಣೆ- 3 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಕರಿಬೇವು – 10 ಎಸಳು, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ – ಇಂಗು.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಶೇಂಗಾ ಹಾಕಿ ಫ್ರೈ ಮಾಡಿಕೊಂಡು ಒಂದು ಕಪ್ ಗೆ ತೆಗೆದಿಟ್ಟುಕೊಳ್ಳಿ.
ನಂತರ ಅದೇ ಪ್ಯಾನ್ ಗೆ ಜೀರಿಗೆ, ಇಂಗು, ಕರಿಬೇವು, ಹಸಿಮೆಣಸು ಹಾಕಿ ಹುರಿದುಕೊಳ್ಳಿ. ನಂತರ ಬೆಳ್ಳುಳ್ಳಿ, ಕತ್ತರಿಸಿಟ್ಟುಕೊಂಡ ನೆಲ್ಲಿಕಾಯಿ ಹಾಕಿ 5 ನಿಮಿಷಗಳ ಕಾಲ ಹುರಿದುಕೊಂಡು ಗ್ಯಾಸ್ ಆಫ್ ಮಾಡಿ.
ಈ ಮಿಶ್ರಣ ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಬೆಲ್ಲ, ಕರಿಬೇವು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಹುರಿದ ಶೇಂಗಾ ಹಾಕಿ ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ.