alex Certify ಥಟ್ಟಂತ ರೆಡಿಯಾಗುವ ರುಚಿಕರ ರಸಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ರೆಡಿಯಾಗುವ ರುಚಿಕರ ರಸಂ

ಬಿಸಿ ಬಿಸಿಯಾದ ಅನ್ನಕ್ಕೆ ರಸಂ ಸೇರಿಸಿ ತಿನ್ನುತ್ತಿದ್ದರೆ ಹೊಟ್ಟೆ ತುಂಬಿದ್ದೇ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ರಸಂ ವಿಧಾನ ಇದೆ. ಮಾಡಿ ಸವಿಯಿರಿ.

ಮೊದಲಿಗೆ 2 ಟೊಮೆಟೊ ಅನ್ನು ಕುಕ್ಕರ್ ಗೆ ಹಾಕಿ ಅದಕ್ಕೆ 1 ಕಪ್ ನೀರು ಹಾಕಿ 1 ವಿಷಲ್ ಕೂಗಿಸಿಕೊಳ್ಳಿ. ಒಂದು ಮಿಕ್ಸಿ ಜಾರಿಗೆ 1 ಚಮಚ ಜೀರಿಗೆ, 1 ಚಮಚ ಕಾಳುಮೆಣಸು, 6 ಎಸಳು ಬೆಳ್ಳುಳ್ಳಿ ಹಾಕಿ ನೀರು ಸೇರಿಸದೇ ರುಬ್ಬಿಕೊಳ್ಳಿ. ನಂತರ 1 ನೆಲ್ಲಿಕಾಯಿ ಗಾತ್ರದ ಹುಳಿಯನ್ನು ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ಕುಕ್ಕರ್ ನಲ್ಲಿದ್ದ ಟೊಮೆಟೊವನ್ನು ಸಿಪ್ಪೆ ತೆಗೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ.

ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ. ಸಾಸಿವೆ, ಚಿಟಿಕೆ ಇಂಗು, ಕರಿಬೇವು ಹಾಕಿ ಹುರಿಯಿರಿ ನಂತರ ಕತ್ತರಿಸಿ ಟೊಮೆಟೊ, ಚಿಟಿಕೆ ಅರಿಸಿನ ಸೇರಿಸಿ ಮೆತ್ತಗಾಗುವವರಗೆ ಮಿಕ್ಸ್ ಮಾಡಿಕೊಳ್ಳಿ.

ನಂತರ ಹುಣಸೆಹಣ್ಣಿನ ರಸ ಸೇರಿಸಿ ಸಣ್ಣತುಂಡು ಬೆಲ್ಲ ಸೇರಿಸಿ ಕುದಿಸಿಕೊಳ್ಳಿ. ಇದಕ್ಕೆ 3 ಕಪ್ ನೀರು ಹಾಕಿ ಕುದಿಯಲು ಬಿಡಿ. ನಂತರ ಇದಕ್ಕೆ ರುಬ್ಬಿಟ್ಟುಕೊಂಡ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಕೊತ್ತಂಬರಿಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...