ಮಧ್ಯಾಹ್ನಕ್ಕೆ ಏನು ಅಡುಗೆ ಮಾಡುವುದು ಎಂದು ಚಿಂತೆಯಲ್ಲಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿದೆ ನೋಡಿ ಸುಲಭವಾಗಿ ಮಾಡುವ ವೆಜ್ ಫ್ರೈಡ್ ರೈಸ್.
ಬೇಕಾಗುವ ಸಾಮಗ್ರಿಗಳು:
ಬಾಸುಮತಿ ಅಕ್ಕಿ-1 ಕಪ್, ಕ್ಯಾರೆಟ್-1, ಬೀನ್ಸ್-12, ಬೇಬಿ ಕಾರ್ನ್-5, ಕಾಳು ಮೆಣಸು ಪುಡಿ-1/2 ಟೀ ಸ್ಪೂನ್, ಸ್ಪ್ರಿಂಗ್ ಆನಿಯನ್-4 ಸ್ಪ್ರಿಂಗ್, ಎಣ್ಣೆ-3 ಟೇಬಲ್ ಸ್ಪೂನ್, ಸಕ್ಕರೆ-1/2 ಟೀ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು 10 ನಿಮಿಷಗಳ ಕಾಲ ನೆನೆಸಿ. ನಂತರ ಒಂದು ಕುಕ್ಕರ್ ನಲ್ಲಿ 1 ½ ಕಪ್ ನೀರು ಹಾಕಿ 3 ವಿಷಲ್ ಕೂಗಿಸಿಕೊಂಡು ಇದನ್ನು ತಣ್ಣಗಾಗಲು ಒಂದು ಪ್ಲೇಟ್ ಗೆ ಹಾಕಿ. ನಂತರ ಕ್ಯಾರೆಟ್, ಬೀನ್ಸ್, ಸ್ಪ್ರಿಂಗ್ ಆನಿಯನ್ ಅನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ.
ನಂತರ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ತರಕಾರಿ, ಸಕ್ಕರೆ ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಇದಕ್ಕೆ ಕಾಳುಮೆಣಸಿನ ಪುಡಿ, ಸ್ಪ್ರಿಂಗ್ ಆನಿಯನ್ ಹಾಕಿ ಫ್ರೈ ಮಾಡಿ. ನಂತರ ಬೇಯಿಸಿಟ್ಟುಕೊಂಡ ಅನ್ನ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ.