ಮಕ್ಕಳಿಗೆ ಕೇಕ್ ತುಂಬಾ ಇಷ್ಟ. ಆದರೆ ಇದನ್ನು ಮಾಡುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇಲ್ಲಿ ಸುಲಭವಾಗಿ ಪಾನ್ ಕೇಕ್ ಮಾಡುವ ವಿಧಾನ ಇದೆ. ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಗೋಧಿ ಹಿಟ್ಟು, ಚಿಟಿಕೆ – ಉಪ್ಪು, 1 ಟೀ ಸ್ಪೂನ್ – ಬೇಕಿಂಗ್ ಪೌಡರ್, ¼ ಟೀ ಸ್ಪೂನ್ – ಚಕ್ಕೆಪುಡಿ, 3 ಟೀ ಸ್ಪೂನ್ – ಸಕ್ಕರೆ, 1.5 ಕಪ್ – ಹಾಲು, 3 ಟೇಬಲ್ ಸ್ಪೂನ್ – ಬೆಣ್ಣೆ.
ಪ್ರವಾಸದ ವೇಳೆ ಇದು ಕಣ್ಣಿಗೆ ಬಿದ್ರೆ ʼಶುಭಕರʼ
ಮಾಡುವ ವಿಧಾನ:
ಒಂದು ಬೌಲ್ ತೆಗೆದುಕೊಂಡು ಅದಕ್ಕೆ 1 ಕಪ್ ಗೋಧಿ ಹಿಟ್ಟು ಹಾಕಿ ಅದಕ್ಕೆ ಚಿಟಿಕೆ ಉಪ್ಪು, ಸಕ್ಕರೆ, ಬೇಕಿಂಗ್ ಪೌಡರ್, ಚಕ್ಕೆ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದು ಪಾನ್ ಗೆ ಹಾಲು ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ಹಾಲು ಬಿಸಿಯಾಗುತ್ತಲೆ ಅದಕ್ಕೆ 1 ಟೇಬಲ್ ಸ್ಪೂನ್ ಬೆಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ಇದನ್ನು ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇದು ಸ್ವಲ್ಪ ದೋಸೆ ಹಿಟ್ಟಿನ ಹದಕ್ಕೆ ಬರಲಿ. ತುಂಬಾ ದಪ್ಪಗೆ ಮಾಡಬೇಡಿ. ದಪ್ಪಗಾದರೆ ಹಾಲು ಬೇಕಾದರೆ ಸೇರಿಸಿ. ನಂತರ ತವಾವೊಂದನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಅದು ಕರಗುತ್ತಲೆ ಈ ಹಿಟ್ಟನ್ನು ಒಂದು ಸೌಟಿನ ಸಹಾಯದಿಂದ ಹಾಕಿ ತುಂಬಾ ತೆಳುವಾಗಿ ಮಾಡಬೇಡಿ. ಹದ ಉರಿಯಲ್ಲಿ ಎರಡು ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ಬಿಸಿಬಿಸಿ ಇರುವಾಗಲೇ ಸರ್ವ್ ಮಾಡಿ.