ಅಡುಗೆ ಮಾಡುವುದಕ್ಕೆ ಏನೂ ಇಲ್ಲ ಎಂದು ತಲೆಬಿಸಿ ಮಾಡಿಕೊಳ್ಳುವ ಬದಲು ಒಂದು ಮಾವಿನ ಕಾಯಿ ಇದ್ದರೆ ರುಚಿಕರವಾದ ರಾಯತ ಮಾಡಿಕೊಂಡು ಹೊಟ್ಟೆತುಂಬಾ ಊಟ ಮಾಡಬಹುದು.
ಮಾಡುವುದಕ್ಕೆ ಅಷ್ಟೇನೂ ಕಷ್ಟ ಕೂಡ ಇಲ್ಲ ಮಾವಿನಕಾಯಿ-ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು-1, ತೆಂಗಿನಕಾಯಿ-1 ಟೇಬಲ್ ಸ್ಪೂನ್, ಮೊಸರು-1 ಕಪ್, ಹಸಿಮೆಣಸು-1, ಉಪ್ಪು ರುಚಿಗೆ ತಕ್ಕಷ್ಟು, ಸಕ್ಕರೆ-1 ಟೀ ಸ್ಪೂನ್, ಉದ್ದಿನಬೇಳೆ-1 ಟೀ ಸ್ಪೂನ್, ಸಾಸಿವೆ-1 ಟೀ ಸ್ಪೂನ್, ಕರಿಬೇವು-8 ಎಸಳು, ಇಂಗು-ಚಿಟಿಕೆ, ಎಣ್ಣೆ-1 ಟೀ ಸ್ಪೂನ್.
ಮಾಡುವ ವಿಧಾನ: ಒಂದು ಮಿಕ್ಸಿ ಜಾರಿಗೆ ಕತ್ತರಿಸಿಟ್ಟುಕೊಂಡ ಮಾವಿನಕಾಯಿ ಹೋಳು, ತೆಂಗಿಕಾಯಿ ತುರಿ, ಹಸಿಮೆಣಸು, ಮೊಸರು ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಉಪ್ಪು ಹಾಗೂ ಸಕ್ಕರೆ ಸೇರಿಸಿ ಒಂದು ಸುತ್ತು ರುಬ್ಬಿಕೊಳ್ಳಿ. ಇದನ್ನು ಒಂದು ಬೌಲ್ ಗೆ ತೆಗೆದುಕೊಳ್ಳಿ. ನಂತರ ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಉದ್ದಿನಬೇಳೆ, ಇಂಗು, ಕರಿಬೇವು ಹಾಕಿ. ಇದನ್ನು ಮಾಡಿಟ್ಟುಕೊಂಡ ರಾಯತಕ್ಕೆ ಸೇರಿಸಿ. ಬಿಸಿಬಿಸಿ ಅನ್ನಕ್ಕೆ ಇದು ಚೆನ್ನಾಗಿರುತ್ತೆ.