alex Certify ಥಟ್ಟಂತ ಮಾಡಿ ‘ಗೋಧಿ’ ಹಿಟ್ಟಿನ ಬರ್ಫಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ಮಾಡಿ ‘ಗೋಧಿ’ ಹಿಟ್ಟಿನ ಬರ್ಫಿ

ಸಿಹಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರೂ ಮನೆಯಲ್ಲಿ ಇರುವಾಗ ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸುವುದು ಸಹಜ. ಹಾಗಾಗಿ ಇಲ್ಲಿ ಸುಲಭವಾಗಿ ಗೋಧಿ ಬರ್ಫಿ ಮಾಡುವ ವಿಧಾನ ಇದೆ ನೋಡಿ.

ಬೇಕಾಗುವ ಸಾಮಗ್ರಿಗಳು:

1ಕಪ್- ಗೋಧಿ ಹಿಟ್ಟು, ½ ಕಪ್ ತುಪ್ಪ, 1 ಕಪ್- ಬೆಲ್ಲದ ಪುಡಿ.

ಮಾಡುವ ವಿಧಾನ: ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದು ಬಿಸಿಯಾಗುತ್ತಲೇ ಸ್ವಲ್ಪ ಸ್ವಲ್ಪ ಗೋಧಿ ಹಿಟ್ಟನ್ನು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಗೋಧಿ ಹಿಟ್ಟು ಪರಿಮಳ ಬರುವವರಗೆ ಹುರಿಯಿರಿ. ನಂತರ ಇದಕ್ಕೆ ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣ ತಳ ಬಿಡುವವರೆಗೆ ಚೆನ್ನಾಗಿ ಕೈಯಾಡಿಸಿ. ನಂತರ ತುಪ್ಪ ಸವರಿದ ಒಂದು ತಟ್ಟೆಗೆ ಈ ಮಿಶ್ರಣ ಹಾಕಿ ಸಮತಟ್ಟು ಮಾಡಿಕೊಳ್ಳಿ. ಹತ್ತು ನಿಮಿಷ ಬಿಟ್ಟು ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...