ಮಕ್ಕಳು ಮನೆಯಲ್ಲಿ ಇದ್ದರೆ ಸಿಹಿತಿಂಡಿಗೆ ಬೇಡಿಕೆ ಜಾಸ್ತಿ. ಏನಾದರೂ ತಿಂಡಿ ಬೇಕು ಎಂದು ಹಟ ಮಾಡುತ್ತಾ ಇರುತ್ತಾರೆ. ಬೇಗನೆ ಆಗುವಂತಹ ತಿಂಡಿ ಇದ್ದರೆ ತಾಯಂದಿರಿಗೂ ಕೆಲಸ ಕಡಿಮೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡುವ ಗೋಧಿ ಲಡ್ಡು ಇದೆ. ಆರೋಗ್ಯಕ್ಕೂ ತುಂಬ ಒಳ್ಳೆಯದು ಇದು.
ಬೇಕಾಗುವ ಸಾಮಗ್ರಿಗಳು:
1 ಕಪ್ ಗೋಧಿಹಿಟ್ಟು, ½ ಕಪ್ – ಬೆಲ್ಲ, ½ ಕಪ್ – ತುಪ್ಪ, ½ ಕಪ್ – ಮಿಕ್ಸಡ್ ಡ್ರೈಫ್ರೂಟ್ಸ್ ತರಿ ತರಿಯಾಗಿ ಪುಡಿ ಮಾಡಿಕೊಂಡಿದ್ದು, (ಗೋಡಂಬಿ, ಬಾದಾಮಿ, ಪಿಸ್ತಾ), ¼ ಟೀ ಸ್ಪೂನ್ – ಏಲಕ್ಕಿ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಗೋಧಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ ತುಪ್ಪ ಸೇರಿಸಿ ಸಣ್ಣ ಉರಿಯಲ್ಲಿ 3 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ. ನಂತರ ಇದಕ್ಕೆ ನಟ್ಸ್ ಸೇರಿಸಿ ಮಿಕ್ಸ್ ಮಾಡಿ ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ಇದನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಇದಕ್ಕೆ ಪುಡಿ ಮಾಡಿದ ಬೆಲ್ಲ ಹಾಗೂ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಉಂಡೆ ಕಟ್ಟಿ.