ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ರುಚಿಕರವಾದದ್ದನ್ನು ಮಾಡಿಕೊಂಡು ತಿನ್ನಬೇಕು ಅನಿಸ್ತಿದೆಯಾ…? ಮನೆಯಲ್ಲಿ ರವಾ ಮೊಸರು ಇದ್ದರೆ ಈ ರವಾ ವಡೆಯನ್ನು ಮಾಡಿಕೊಂಡು ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
1 ಕಪ್ ನಷ್ಟು ರವೆ, ಈರುಳ್ಳಿ-2 ಕತ್ತರಿಸಿಕೊಂಡಿದ್ದು, 100 ಗ್ರಾಂ-ಮೊಸರು, ಸಣ್ಣಗೆ ಹೆಚ್ಚಿಟ್ಟುಕೊಂಡ ತೆಂಗಿನಕಾಯಿ ಚೂರು-3 ಟೇಬಲ್ ಸ್ಪೂನ್, ¼ ಕಪ್- ಕೊತ್ತಂಬರಿ ಸೊಪ್ಪು, ಕರಿಬೇವು-ಸ್ವಲ್ಪ, 4-ಹಸಿಮೆಣಸು ಕತ್ತರಿಸಿಕೊಂಡಿದ್ದು, ಶುಂಠಿ ತುರಿ-1 ಇಂಚು, ಚಿಟಿಕೆ-ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ:
ಒಂದು ದೊಡ್ಡ ಬೌಲ್ ಗೆ ಈರುಳ್ಳಿ, ಮೊಸರು, ತೆಂಗಿನಕಾಯಿ ಚೂರು, ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಸೋಡಾ 2 ಟೇಬಲ್ ಸ್ಪೂನ್. ಇದೆಲ್ಲವನ್ನೂ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 10 ನಿಮಿಷಗಳ ಕಾಲ ಇದನ್ನು ಹಾಗೆಯೇ ಇಟ್ಟು ಬಿಡಿ.
ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ನಂತರ ರವೆಯ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಟ್ಟುಕೊಳ್ಳಿ. ನಂತರ ಈ ಉಂಡೆಗಳನ್ನು ಕೈಯಿಂದ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ರವಾ ವಡೆ ಸವಿಯಲು ಸಿದ್ಧ.