ಊಟದ ಜತೆ ಉಪ್ಪಿನಕಾಯಿ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಆದರೆ ಎಲ್ಲಾ ಸಮಯದಲ್ಲೂ ಮಾವಿನಕಾಯಿ ಸಿಗುವುದಿಲ್ಲ. ಇದರ ಬದಲು ಕೆಲವು ತರಕಾರಿ ಬಳಸಿ ಕೂಡ ರುಚಿಕರವಾದ ಉಪ್ಪಿನಕಾಯಿ ಮಾಡಬಹುದು. ಇಲ್ಲಿದೆ ನೋಡಿ ಕ್ಯಾರೆಟ್ ಉಪ್ಪಿನಕಾಯಿ ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಕ್ಯಾರೆಟ್, ಉಪ್ಪು – ಅಗತ್ಯವಿರುವಷ್ಟು, 3 ಟೇಬಲ್ ಸ್ಪೂನ್ – ಎಣ್ಣೆ, 2 ಟೇಬಲ್ ಸ್ಪೂನ್ – ಶುಂಠಿ, 1/8 ಟೀ ಸ್ಪೂನ್ – ಅರಿಶಿನ, ¼ ಟೀ ಸ್ಪೂನ್ – ಮೆಂತೆಕಾಳು, 2 ಟೀ ಸ್ಪೂನ್ – ಸಾಸಿವೆ, 2 ಟೀ ಸ್ಪೂನ್ – ಖಾರದ ಪುಡಿ, ¾ ಟೇಬಲ್ ಸ್ಪೂನ್ – ಲಿಂಬೆಹಣ್ಣಿನ ರಸ.
ಮಾಡುವ ವಿಧಾನ:
ಮೆಂತೆಕಾಳುಗಳನ್ನು ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಸಾಸಿವೆ ಸೇರಿಸಿ ಇದು ಚಟಪಟ ಎಂದಾಗ ಗ್ಯಾಸ್ ಆಫ್ ಮಾಡಿ. ಇದು ತಣ್ಣಗಾದ ಮೇಲೆ ಪುಡಿ ಮಾಡಿಕೊಳ್ಳಿ. ಕ್ಯಾರೆಟ್, ಶುಂಠಿಯನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆ ತೆಗೆದು ನೀರೆಲ್ಲಾ ಒರೆಸಿಕೊಂಡು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ.
ಪ್ಯಾನ್ ಗೆ ಎಣ್ಣೆ ಹಾಕಿ ಗ್ಯಾಸ್ ಮೇಲೆ ಇಡಿ. ಇದು ಬಿಸಿಯಾಗುತ್ತಲೇ ಅದಕ್ಕೆ ಕ್ಯಾರೆಟ್, ಶುಂಠಿ ಹಾಕಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿ. ಇದಕ್ಕೆ ಉಪ್ಪು, ಅರಿಶಿನ, ಖಾರದ ಪುಡಿ, ಸಾಸಿವೆ, ಮೆಂತ್ಯಕಾಳಿನ ಪುಡಿ ಸೇರಿಸಿ ಮಿಕ್ಸ್ ಮಾಡಿ. ಇದು ತಣ್ಣಗಾದ ಮೇಲೆ ಲಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಗಾಜಿನ ಡಬ್ಬದಲ್ಲಿ ಸ್ಟೋರ್ ಮಾಡಿಕೊಳ್ಳಿ.