ಕೆಲವರಿಗೆ ಸಾಂಬಾರು, ಸಾಗು ಇದ್ದರೂ ಚಟ್ನಿ ಬೇಕೆ ಬೇಕು. ಇಲ್ಲಿ ರುಚಿಕರವಾದ ಈರುಳ್ಳಿ ಚಟ್ನಿ ಮಾಡುವ ವಿಧಾನ ಇದೆ. ಇದು ದೋಸೆ, ಇಡ್ಲಿ ಜತೆ ಸಖತ್ ಆಗಿರುತ್ತದೆ. ಮಾಡುವುದು ಕೂಡ ಸುಲಭವಿದೆ.
ಬೇಕಾಗುವ ಸಾಮಾಗ್ರಿಗಳು:
ಅರ್ಧ ಕಪ್- ತೆಂಗಿನಕಾಯಿ ತುರಿ, ಈರುಳ್ಳಿ-1 ಸಣ್ಣದ್ದು, ಒಣ ಮೆಣಸು-2, ಸಣ್ಣ ಪೀಸ್-ಹುಣಸೆಹಣ್ಣು, ಉಪ್ಪು-ರುಚಿಗೆ ತಕ್ಕಷ್ಟು, ಸ್ವಲ್ಪ ನೀರು.
ಮಾಡುವ ವಿಧಾನ:
ಒಂದು ಮಿಕ್ಸಿ ಜಾರು ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಈರುಳ್ಳಿ, ಒಣಮೆಣಸು, ಹುಣಸೆಹಣ್ಣು, ಉಪ್ಪು, ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.
ನಂತರ ಒಂದು ಒಗ್ಗರಣೆ ಪಾತ್ರೆಗೆ 1 ಟೀ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ 1 ಟೀ ಸ್ಪೂನ್ ಸಾಸಿವೆ, 1 ಒಣಮೆಣಸು, 5 ಎಸಳು ಕರಿಬೇವು ಹಾಕಿ ನಂತರ ಈ ಒಗ್ಗರಣೆಯನ್ನು ಚಟ್ನಿಗೆ ಹಾಕಿ. ದೋಸೆ, ಇಡ್ಲಿ ಜತೆ ಸವಿಯಲು ಈ ಚಟ್ನಿ ತುಂಬಾ ಚೆನ್ನಾಗಿರುತ್ತದೆ.