ಬಿಸಿ ಬಿಸಿ ಅನ್ನದ ಜತೆ ಹುಳಿ-ಸಿಹಿಯಾದ ಪಲ್ಯ ಹಾಕಿಕೊಂಡು ಊಟ ಮಾಡುತ್ತಿದ್ದರೆ ಬೇರೆ ಸಾಂಬಾರು, ಪಲ್ಯ ಯಾವುದು ಬೇಡ ಅನಿಸುತ್ತದೆ. ಇಲ್ಲಿ ರುಚಿಕರವಾದ ಈರುಳ್ಳಿ ಪಲ್ಯ ಮಾಡುವ ವಿಧಾನ ಇದೆ ನೋಡಿ.
ಬೇಕಾಗುವ ಸಾಮಗ್ರಿಗಳು:
2 ಟೇಬಲ್ ಸ್ಪೂನ್ – ಎಣ್ಣೆ, 2 ಟೀ ಸ್ಪೂನ್ – ಜೀರಿಗೆ, 1 ಟೀ ಸ್ಪೂನ್ – ಸಾಸಿವೆ, 4 – ಒಣಮೆಣಸು, 4 ಕಪ್ – ಕತ್ತರಿಸಿಕೊಂಡ ಈರುಳ್ಳಿ, 2 ಟೀ ಸ್ಪೂನ್ – ಖಾರದ ಪುಡಿ, 1 ಟೀ ಸ್ಪೂನ್ – ಉಪ್ಪು, ¼ ಕಪ್ – ಲಿಂಬೆಹಣ್ಣಿನ ರಸ, ¼ ಕಪ್ – ಸಕ್ಕರೆ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದು ಬಿಸಿಯಾಗುತ್ತಲೇ ಅದಕ್ಕೆ ಜೀರಿಗೆ, ಸಾಸಿವೆ, ಒಣಮೆಣಸು ಹಾಕಿ ಫ್ರೈ ಮಾಡಿ ನಂತರ ಇದಕ್ಕೆ ಈರುಳ್ಳಿ ಸೇರಿಸಿಕೊಂಡು ಹೊಂಬಣ್ಣ ಬರುವವರಗೆ ಫ್ರೈ ಮಾಡಿ ಇದಕ್ಕೆ ಖಾರದ ಪುಡಿ, ಉಪ್ಪು, ಲಿಂಬೆಹಣ್ಣಿನರಸ, ಸಕ್ಕರೆ ಸೇರಿಸಿ 1 ನಿಮಿಷಗಳ ಕಾಲ ಕುದಿಸಿದರೆ ಥಟ್ಟಂತ ಆಗಿ ಬಿಡುತ್ತೆ ಈ ಈರುಳ್ಳಿ ಪಲ್ಯ. ಇದನ್ನು ಸ್ಯಾಂಡ್ ವಿಚ್ ಜತೆ ಕೂಡ ಸವಿಯಬಹುದು.