
ಸುಂದರವಾಗಿ ಕಾಣಬೇಕು ಎಂಬ ಬಯಕೆ ಹೊಂದಿರದವರಾದರೂ ಯಾರು ಹೇಳಿ. ಮುಖದಲ್ಲಿ ಸುಕ್ಕು ನೆರಿಗೆಗಳು ಬೀಳದಂತೆ ತಡೆಯಲು ದುಬಾರಿ ಖರ್ಚು ಮಾಡಬೇಕೆಂದೇನಿಲ್ಲ. ಮನೆಯಲ್ಲಿ ಸಿಗುವ ವಸ್ತುಗಳಿಂದ ತ್ವಚೆಯನ್ನು ಕಾಪಾಡಿಕೊಳ್ಳಬಹುದು.
ಮೊಟ್ಟೆಯಲ್ಲಿ ಹೆಚ್ಚು ಪ್ರೊಟೀನ್ ಇರುವುದು ಅದರ ಬಿಳಿಭಾಗದಲ್ಲಿ. ಇದು ಮುಖದ ಡೆಡ್ ಸ್ಕಿನ್ ಹಾಗೂ ಓಪನ್ ಪೋರ್ಸ್ ಗಳನ್ನು ತೆಗೆದು ಹಾಕಿ ಚರ್ಮಕ್ಕೆ ಹೊಳಪು ನೀಡುತ್ತದೆ. ಇದನ್ನು ಎಲ್ಲಾ ರೀತಿಯ ಚರ್ಮಕ್ಕೆ ಅಂದರೆ ಸೆನ್ಸಿಟಿವ್ ಸ್ಕಿನ್ ಆಯಿಲಿ ಸ್ಕಿನ್, ಡ್ರೈ ಸ್ಕಿನ್ ಗಳಿಗೂ ಉಪಯೋಗಿಸಬಹುದು.
ಮೊಟ್ಟೆಯ ಬಿಳಿ ಭಾಗ ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಯನ್ನು ಕೂಡ ತೆಗೆದು ಹಾಕುತ್ತದೆ. ವ್ಯಾಸಲಿನ್ ನಲ್ಲಿರುವ ಪೆಟ್ರೋಲಿಯಂ ಜೆಲ್ ಮುಖಕ್ಕೆ ಒಳ್ಳೆಯ ಮಾಯಿಸ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದಕ್ಕೆ ಮುಖದ ಒರಟು ತ್ವಚೆಯನ್ನು ಮೃದುವಾಗಿಸುವ ಗುಣವಿದೆ. ಮೊಟ್ಟೆಯ ಬಿಳಿಯ ಭಾಗಕ್ಕೆ ಒಂದು ಚಮಚ ವ್ಯಾಸಲಿನ್ ಸೇರಿಸಿ ರಾತ್ರಿ ಮಲಗುವ ಮುಂಚೆ ಮುಖಕ್ಕೆ ಹಚ್ಚಬೇಕು. ನಂತರ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಟ್ಟು ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು.