ಚಳಿಗಾಲದಲ್ಲಿ ತ್ವಚೆ ಒಣಗುವುದು ಸಾಮಾನ್ಯ. ಕೆಲವು ಮನೆ ಮದ್ದುಗಳ ಮೂಲಕ ನಿಮ್ಮ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಅವುಗಳು ಯಾವುದೆಂದು ನೋಡೋಣ.
ಲೋಳೆರಸದ ಚಿಗುರಿನ ಅಂಟನ್ನು ತೆಗೆದು ತ್ವಚೆ ಒಣಗಿದ ಭಾಗಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಮುಖ ತೊಳೆಯುವುದರಿಂದ ಮುಖ ಒಣಗಿದ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ತ್ವಚೆ ಮೃದುವಾಗಿ ಆಕರ್ಷಣೀಯವಾಗುತ್ತದೆ.
ಚೆನ್ನಾಗಿ ಬಲಿತ ಟೊಮೆಟೊ ಹಣ್ಣನ್ನು ರುಬ್ಬಿ ಪೇಸ್ಟ್ ತಯಾರಿಸಿ, ಇದಕ್ಕೆ ರೋಸ್ ವಾಟರ್ ಬೆರೆಸಿ ಮುಖ ಕಾಲು ಕೈಗೆ ಹಚ್ಚಿಕೊಂಡರೆ ತ್ವಚೆ ಒಡೆಯುವ ಸಮಸ್ಯೆ ದೂರವಾಗುತ್ತದೆ.
ನಿತ್ಯ ಬೆಳಿಗ್ಗೆ ಸ್ನಾನ ಮುಗಿಸಿ ಬಂದಾಕ್ಷಣ ಮೈ ಕೈ ಕಾಲಿಗೆ ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ತ್ವಚೆ ಬಿರುಕು ಬಿಡುವ, ಒಣಗುವ ಸಮಸ್ಯೆ ದೂರವಾಗುತ್ತದೆ.
ಹಾಲಿನ ಕೆನೆಗೆ ಜೇನುತುಪ್ಪ ಬೆರೆಸಿ ತ್ವಚೆ ಒಣಗಿದ ಭಾಗಕ್ಕೆ ಹಚ್ಚುವುದರಿಂದ ಒಂದೆರಡು ದಿನದಲ್ಲೇ ತ್ವಚೆಯ ಸಮಸ್ಯೆ ದೂರವಾಗುತ್ತದೆ.
ಸ್ನಾನಕ್ಕೆ ಮುನ್ನ ಎಳ್ಳೆಣ್ಣೆ ಹಚ್ಚುವುದರಿಂದಲೂ ಒಣ ತ್ವಚೆ ಸಮಸ್ಯೆ ಇಲ್ಲವಾಗುತ್ತದೆ. ಹೆಚ್ಚಿನ ಅಂಟಿನ ಗುಣ ಹೊಂದಿರುವ ಇದನ್ನು ಸ್ನಾನಕ್ಕೆ ಅರ್ಧ ಗಂಟೆ ಮುಂಚೆ ಹಚ್ಚುವುದೇ ಒಳ್ಳೆಯದು.