
ಮನೆಯಿಂದ ಹೊರಹೋಗಿಲ್ಲ ಎಂದುಕೊಂಡು ಸನ್ ಸ್ಕ್ರೀನ್ ಲೋಷನ್ ಬಳಸುವುದನ್ನು ಬಿಟ್ಟುಬಿಟ್ಟಿದ್ದೀರೇ ಇದು ತಪ್ಪು, ಮನೆಯೊಳಗಿದ್ದರೂ ನೀವು ಸನ್ ಸ್ಕ್ರೀನ್ ಲೋಷನ್ ಬಳಸಬೇಕು.
ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಅಥವಾ ಕಂಪ್ಯೂಟರ್ ಮುಖಾಂತರ ನೀವು ಕೆಲಸ ಮಾಡುತ್ತಿದ್ದೀರಾ…? ನೀಲಿ ಬೆಳಕಿನ ದುಷ್ಟರಿಣಾಮಗಳ ಬಗ್ಗೆ ನಿಮಗೆ ಗೊತ್ತೇ. ನಿತ್ಯ ಬಳಸುವ ಈ ಗ್ಯಾಡ್ಜೆಟ್ ಗಳಿಂದ ಬರುವ ನೀಲಿ ಬೆಳಕು ತ್ವಚೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ಸಮಯವನ್ನು ಇವುಗಳೊಂದಿಗೆ ಕಳೆಯುವ ಕಾರಣ ನೀವು ಮನೆಯಲ್ಲೂ ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದೇ ಒಳ್ಳೆಯದು.
ಮನೆಯಲ್ಲೇ ಇರುವುದರಿಂದ ಧೂಳು, ಕೊಳೆ ಅಂಟಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ತ್ವಚೆಯ ಬಗ್ಗೆ ಹೆಚ್ಚು ಗಮನ ಕೊಡದೆ ಹೋದರೆ ಇದರಿಂದ ಚರ್ಮ ನಿಸ್ತೇಜನವಾಗಬಹುದು. ಮನೆಯಲ್ಲೇ ಇದ್ದರೂ ತ್ವಚೆಗೆ ಬೇಕಾದ ಪೋಷಕಾಂಶಗಳನ್ನು ನಿರಂತರವಾಗಿ ನೀಡುತ್ತಿರಿ. ಉದಾಸೀನತೆ ಅಥವಾ ಬಳಲಿಕೆಯ ನೆಪ ಒಡ್ಡಿ ತ್ವಚೆ ಆರೈಕೆ ಕಡೆಗಣಿಸದಿರಿ.
ಏರ್ ಕಂಡಿಷನರ್ ಕೋಣೆಯಲ್ಲಿ ಕುಳಿತಿದ್ದರೆ ತ್ವಚೆ ಒಣಗಿದಂತಾಗುವುದು ಸಾಮಾನ್ಯ. ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ತಯಾರಿಸಿದ ಫೇಸ್ ಪ್ಯಾಕ್ ಗಳನ್ನೇ ಉಪಯೋಗಿಸಿ. ತ್ವಚೆ ಆರೈಕೆಗೂ ಗಮನ ಕೊಡಿ.