ಯುಗಾದಿ ದಿನ ಸಿಹಿ – ಕಹಿ ಸಮನಾಗಿರಲಿ ಎಂದುಕೊಂಡು ಬೆಲ್ಲದೊಂದಿಗೆ ಬೇವನ್ನು ಸೇವಿಸುತ್ತೇವೆ. ಇದು ಸಾಂಕೇತಿಕವಾಗಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಬಹುಪಕಾರಿ ಎಂಬುದು ನಿಮಗೆ ಗೊತ್ತೇ…?
ಇದರಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂಧ್ರ ನಿವಾರಕಗಳಿದ್ದು ಇದನ್ನು ಅರೆದು ಹಚ್ಚುವುದರಿಂದ ಗಾಯ ಬೇಗನೆ ಮಾಯವಾಗುತ್ತದೆ. ಸಿಡುಬು, ದದ್ದು ಮೊದಲಾದ ಕಾಯಿಲೆಗಳು ಬಂದ ಬಳಿಕ ಈ ಸೊಪ್ಪಿನ ರಸವನ್ನು ಹಚ್ಚಿ ಸ್ನಾನ ಮಾಡಿದರೆ ತ್ವಚೆಯಲ್ಲಿ ಉಳಿದ ಕಲೆಗಳು ಮಾಯವಾಗುತ್ತವೆ.
ಬೇವಿನ ಎಲೆಗಳನ್ನು ಸೇವಿಸುವುದರಿಂದ ಲಿವರ್ ಸಂಬಂಧಿ ಸಮಸ್ಯೆಗಳು ಇಲ್ಲವಾಗುತ್ತವೆ. ಈ ಸೊಪ್ಪು ದೇಹದಲ್ಲಿ ಜಮೆಯಾದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಶ್ವಾಸಕೋಶದ ಕಾರ್ಯವೈಖರಿಯನ್ನು ಉತ್ತಮಗೊಳಿಸುತ್ತದೆ.
ಚರ್ಮದ ಹಲವಾರು ಸಮಸ್ಯೆಗಳಿಗೆ ಬೇವಿನ ಸೊಪ್ಪು ಹಾಕಿದ ನೀರಿನ ಸ್ನಾನ ಇಲ್ಲವೇ ಇದನ್ನು ಅರೆದು ಹಚ್ಚುವುದರಿಂದ ವಾಸಿ ಮಾಡಿಕೊಳ್ಳಬಹುದು. ತ್ವಚೆಯ ಮೇಲೆ ಉಳಿದ ಮೊಡವೆಯ ಕಲೆ ನಿವಾರಣೆಗೂ ಇದು ಉಪಕಾರಿ.