ವಯಸ್ಸು 40ರ ಗಡಿ ದಾಟುತ್ತಿದ್ದಂತೆ ತ್ವಚೆ ಮೊದಲಿನ ಆಕರ್ಷಣೆ ಕಳೆದುಕೊಳ್ಳುತ್ತದೆ. ಅಲ್ಲಲ್ಲಿ ಸುಕ್ಕು, ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ನೀವು ಕೆಲವು ವಸ್ತುಗಳಿಂದ ದೂರವಿರುವುದರಿಂದ ನಿಮ್ಮಲ್ಲಿ ವಯಸ್ಸಾದ ಲಕ್ಷಣಗಳಾಗುವುದನ್ನು ಮತ್ತಷ್ಟು ಮುಂದೆ ಹಾಕಬಹುದು.
ವಯಸ್ಸು ನಲ್ವತ್ತು ಆದ ಬಳಿಕ ಹೆಚ್ಚು ವ್ಯಾಯಾಮ ಮಾಡುವುದು, ಭಾರ ಎತ್ತುವುದು ಒಳ್ಳೆಯದಲ್ಲ. ಇದರಿಂದ ನಿಮ್ಮ ತ್ವಚೆ ಹೆಚ್ಚು ವಯಸ್ಸಾದಂತೆ ಗೋಚರಿಸುತ್ತದೆ.
ಹೆಚ್ಚು ಉಪ್ಪು ಮತ್ತು ಹೆಚ್ಚು ಸಿಹಿಯಾದ ವಸ್ತುಗಳ ಸೇವನೆಯಿಂದ ನಿಮ್ಮ ದೇಹ ಹಲವು ರೋಗಗಳ ಗೂಡಾಗಬಹುದು. ಇನ್ಸುಲಿನ್ ಹೆಚ್ಚುವುದರಿಂದ ತ್ವಚೆಯಲ್ಲಿ ಬಿರುಕುಗಳು ಕಾಣಿಸಿಕೊಂಡಾವು. ರೋಗಗಳು ಹೆಚ್ಚಿದಂತೆ ತ್ವಚೆ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ.
ವೈದ್ಯರು ಹೇಳಿದ್ದರೆ ಮಾತ್ರ ಅಂದರೆ ಪವರ್ ಗ್ಲಾಸ್ ಬಳಸಲು ಸೂಚಿಸಿದ್ದರೆ ಮಾತ್ರ ಕನ್ನಡಕ ಧರಿಸಿ. ಬಿಸಿಲಿಗೆ ಹೋಗುವಾಗ ಸನ್ ಗ್ಲಾಸ್ ಧರಿಸಲು ಮರೆಯದಿರಿ. ಉಳಿದಂತೆ ದಿನವಿಡೀ ಕನ್ನಡಕ ಧರಿಸಿ ಕೂರುವುದು ಒಳ್ಳೆಯದಲ್ಲ.