alex Certify ತ್ವಚೆಯ ಆರೈಕೆಗೆ ಬಳಸಿ ಈ ಮ್ಯಾಜಿಕಲ್‌ ಆಯಿಲ್‌, ಇದ್ರಿಂದ ದುಪ್ಪಟ್ಟಾಗುತ್ತೆ ನಿಮ್ಮ ಸೌಂದರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆಯ ಆರೈಕೆಗೆ ಬಳಸಿ ಈ ಮ್ಯಾಜಿಕಲ್‌ ಆಯಿಲ್‌, ಇದ್ರಿಂದ ದುಪ್ಪಟ್ಟಾಗುತ್ತೆ ನಿಮ್ಮ ಸೌಂದರ್ಯ

ಇತ್ತೀಚಿನ ದಿನಗಳಲ್ಲಿ ಮನುಷ್ಯರು ಪ್ರಕೃತಿಯಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದಾರೆ. ಪರಿಣಾಮ ಅನೇಕ ರೀತಿಯ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ. ನೈಸರ್ಗಿಕ ವಸ್ತುಗಳಲ್ಲಿರುವ ಉತ್ತಮ ಗುಣಗಳು ಎಷ್ಟೇ ಹಣ ಕೊಟ್ಟರೂ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ.

ಟೀ ಟ್ರೀ ಆಯಿಲ್ ಕೂಡ ಇವುಗಳಲ್ಲೊಂದು. ಇದೊಂದು ನೈಸರ್ಗಿಕ ಎಣ್ಣೆ. ಮುಖದ ಅಂದವನ್ನು ದುಪ್ಪಟ್ಟು ಮಾಡಬಲ್ಲ ಗುಣಗಳನ್ನು ಹೊಂದಿದೆ. ಇದರಲ್ಲಿ ಎಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿವೆ. ಇದು ಚರ್ಮವನ್ನು ಎಲ್ಲಾ ರೀತಿಯಲ್ಲಿ ಸುರಕ್ಷಿತವಾಗಿರಿಸುತ್ತದೆ.

ಮುಖದ ಕಲೆಗಳು ನಮ್ಮ ಸೌಂದರ್ಯಕ್ಕೇ ಕುತ್ತು ತರುತ್ತವೆ. ಅವುಗಳನ್ನು ತೊಡೆದುಹಾಕಲು ದುಬಾರಿ ಕ್ರೀಮ್‌ಗಳ ಬದಲಿಗೆ ಟೀ ಟ್ರೀ ಆಯಿಲ್‌ ಬಳಸಿ. ಟೀ ಟ್ರೀ ಎಣ್ಣೆಯ ಕೆಲವು ಹನಿಗಳನ್ನು ಒಂದು ಚಮಚ ಜೇನುತುಪ್ಪದಲ್ಲಿ ಬೆರೆಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 10 ರಿಂದ 20 ನಿಮಿಷಗಳ ಕಾಲ ಬಿಡಿ. ಆ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.

ಸಾಮಾನ್ಯವಾಗಿ ಕಪ್ಪು ಚುಕ್ಕೆಗಳ ಸಮಸ್ಯೆ ಎಣ್ಣೆಯುಕ್ತ ಚರ್ಮ ಹೊಂದಿರುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಮುಖದ ಅಂದವನ್ನು ಕಡಿಮೆ ಮಾಡುತ್ತದೆ. ಈ ಕಪ್ಪು ಚುಕ್ಕೆಗಳನ್ನು ಹೋಗಲಾಡಿಸಲು ಟಿ ಟ್ರೀ ಆಯಿಲ್‌ ಬಳಸಬಹುದು. ಮುಲ್ತಾನಿ ಮಿಟ್ಟಿಗೆ ಟೀ ಟ್ರೀ ಆಯಿಲ್‌ ಬೆರೆಸಿ ಅದನ್ನು ಮುಖದ ಮೇಲೆ ಲೇಪಿಸಬೇಕು. ಇದರಿಂದ ಬ್ಲಾಕ್ ಹೆಡ್ಸ್ ಸಮಸ್ಯೆಯು ತಕ್ಷಣವೇ ದೂರವಾಗುತ್ತದೆ.

ಮೊಡವೆಗಳು ಬಹುತೇಕ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಇದಕ್ಕೂ ಟೀ ಟ್ರೀ ಆಯಿಲ್‌ನಿಂದ ಪರಿಹಾರ ಸಿಗುತ್ತದೆ. ಟೀ ಟ್ರೀ ಆಯಿಲ್‌ನಲ್ಲಿರುವ ಗುಣಲಕ್ಷಣಗಳು ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುತ್ತದೆ. ಇದಕ್ಕಾಗಿ ಟೀ ಟ್ರೀ ಆಯಿಲ್ ಅನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಕೆಲವೇ ದಿನಗಳಲ್ಲಿ, ಕಲೆಗಳು ಕಣ್ಮರೆಯಾಗುತ್ತವೆ.

ಮೇಕಪ್‌ ರಿಮೂವರ್‌ ಆಗಿಯೂ ಇದು ಕೆಲಸ ಮಾಡುತ್ತದೆ. ಈ ಎಣ್ಣೆಯು ಮೇಕ್ಅಪ್ ತೊಡೆದು ಹಾಕಲು ಸಹಾಯ ಮಾಡುತ್ತದೆ ಮತ್ತು ಮುಖದ ಮೇಲಿನ ರಂಧ್ರಗಳಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಮೇಕ್ಅಪ್ ತೆಗೆದುಹಾಕಲು ಹತ್ತಿಗೆ ಸ್ವಲ್ಪ ಟೀ ಟ್ರೀ ಆಯಿಲ್‌ ಹಾಕಿಕೊಂಡು ಅದರಿಂದ ರಿಮೂವ್‌ ಮಾಡಿ. ಹೀಗೆ ಹತ್ತಾರು ಬಗೆಯ ಉಪಯೋಗಗಳನ್ನು ಹೊಂದಿರುವ ಟಿ ಟ್ರೀ ಆಯಿಲ್‌ ನಮ್ಮ ಸೌಂದರ್ಯವನ್ನು ಡಬಲ್‌ ಮಾಡಲು ಸಹಕಾರಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...