ತ್ವಚೆಯ ಆರೈಕೆ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಏಕೆನ್ನುತ್ತೀರಾ, ಕೆಲವು ಸರಳವಾದ ಟಿಪ್ಸ್ ಗಳನ್ನು ಅನುಸರಿಸಿದರೆ ಸಾಕು, ಸರಳ ಸುಂದರ ಮುಖ ನಿಮ್ಮದಾಗುತ್ತದೆ.
ಯಾವುದಾದರೂ ಹೊಸ ಉತ್ಪನ್ನ ಮಾರುಕಟ್ಟೆಗೆ ಬಂದಾಗ, ಅದರ ಜಾಹೀರಾತನ್ನು ವೀಕ್ಷಿಸಿದಾಗ ನಿಮಗೆ ಬಯಕೆಯಾಗುವುದು ಸಹಜ. ಆದರೆ ನೆನಪಿಟ್ಟುಕೊಳ್ಳಿ. ಯಾವುದೇ ಉತ್ಪನ್ನ ರಾಸಾಯನಿಕ ಮುಕ್ತವಾಗಿಲ್ಲ.
ಇಷ್ಟಕ್ಕೂ ನಿಮ್ಮ ತ್ವಚೆಗೆ ಯಾವ ರೀತಿಯ ಆರೈಕೆ ಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಮೊಡವೆಗಳು ಮೂಡುತ್ತಿದ್ದರೆ ಅದಕ್ಕೆ ಬೇರೆಯದೇ ರೀತಿಯ ಕಾಳಜಿ ಬೇಕು, ಇನ್ನು ಕಲೆಗಳು ಉಳಿದಿದ್ದರೆ ಅದಕ್ಕೆ ಹೊಂದುವ ಟ್ರೀಟ್ ಮೆಂಟ್ ನೀಡಿ.
ಯಾವುದೇ ಹೊಸ ಉತ್ಪನ್ನ ನಿಮ್ಮ ತ್ವಚೆಗೆ ಹೊಂದಿಕೊಳ್ಳುತ್ತದೆಯೋ ಇಲ್ಲವೋ ಎಂಬುದನ್ನು ಸೌಂದರ್ಯ ತಜ್ಞರ ಬಳಿ ಕೇಳಿ ತಿಳಿದುಕೊಳ್ಳಿ. ಮಾಯಿಸ್ಚರೈಸರ್ ಬದಲಿಗೆ ಸೀರಂ ಬಳಸಿ. ಇದು ತ್ವಚೆಯನ್ನು ಮೃದುವಾಗಿಸುತ್ತದೆ.
ದುಬಾರಿ ಮೊತ್ತದ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ನಿಮ್ಮ ಆರ್ಥಿಕ ಸ್ಥಿತಿಗೆ ಹೊಂದಿಕೊಳ್ಳುವ ಉತ್ಪನ್ನಗಳನ್ನು ಆಯ್ದುಕೊಳ್ಳಿ. ಈ ಉತ್ಪನ್ನಗಳನ್ನು ಬಳಸುವುದರ ಜೊತೆಗೆ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ.