alex Certify ತ್ರಯೋದಶಿಯಂದು ಯಾವ ರಾಶಿಯವರು ಯಾವ ವಸ್ತು ಖರೀದಿ ಮಾಡಬೇಕು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ರಯೋದಶಿಯಂದು ಯಾವ ರಾಶಿಯವರು ಯಾವ ವಸ್ತು ಖರೀದಿ ಮಾಡಬೇಕು….?

ದೀಪಗಳ ಹಬ್ಬ ದೀಪಾವಳಿ. ಹಿಂದುಗಳ ಮುಖ್ಯ ಹಬ್ಬಗಳಲ್ಲಿ ಒಂದಾಗಿರುವ ದೀಪಾವಳಿ ಐದು ದಿನಗಳ ಹಬ್ಬ. ಹಬ್ಬದ ಮೊದಲ ದಿನ ಇಂದು ತ್ರಯೋದಶಿ. ಅಂದು ವಸ್ತುಗಳ ಖರೀದಿಗೆ ಬಹಳ ಒಳ್ಳೆಯ ದಿನ. ಧನ್ವಂತರಿ ದೇವಿಯ ಪೂಜೆಯನ್ನು ಭಕ್ತರು ಭಕ್ತಿಯಿಂದ ಮಾಡ್ತಾರೆ.

ತ್ರಯೋದಶಿಯಾದ ಅ.23 ರಂದು ಕೆಲವೊಂದು ವಸ್ತುಗಳನ್ನು ಮನೆಗೆ ತರುವುದರಿಂದ ಸುಖ ಹಾಗೂ ಸಮೃದ್ಧಿ ಲಭಿಸುತ್ತದೆ. ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸ್ತಾಳೆಂಬ ನಂಬಿಕೆ ಇದೆ. ಅದರಲ್ಲೂ ರಾಶಿಗೆ ಅನುಗುಣವಾಗಿ ವಸ್ತುಗಳ ಖರೀದಿ ಮಾಡಿದ್ರೆ ಮತ್ತಷ್ಟು ಒಳ್ಳೆಯದು.

ಯಾವ ರಾಶಿಯವರಿಗೆ ಯಾವ ವಸ್ತು:

ಮೇಷ: ಬೆಳ್ಳಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವುದು ಒಳ್ಳೆಯದು. ಚರ್ಮದ ವಸ್ತು, ರಾಸಾಯನಿಕಗಳನ್ನು ಖರೀದಿ ಮಾಡಬಾರದು.

ವೃಷಭ: ಈ ರಾಶಿಯವರು ಬಟ್ಟೆ ಖರೀದಿ ಮಾಡಿದ್ರೆ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಇದರ ಜೊತೆಗೆ ಬೆಳ್ಳಿ ಹಾಗೂ ತಾಮ್ರದ ಪಾತ್ರೆಗಳನ್ನು ಖರೀದಿ ಮಾಡಿದ್ರೆ ಒಳ್ಳೆಯದು. ವಾಹನ, ತೈಲ ಹಾಗೂ ಚರ್ಮದಿಂದ ಮಾಡಿದ ಮತ್ತು ಮರದಿಂದ ಮಾಡಿದ ವಸ್ತುಗಳನ್ನು ಖರೀದಿ ಮಾಡದಿರುವುದು ಒಳಿತು.

ಮಿಥುನ: ಚಿನ್ನ ಖರೀದಿ ಮಂಗಳಕರ. ಹಸಿರು ಬಣ್ಣದ ಸಾಮಾನುಗಳ ಖರೀದಿ ಕೂಡ ಒಳ್ಳೆಯದು. ಬೇರೆಯವರಿಗಾಗಿ ಇಂದು ಹಣ ಖರ್ಚು ಮಾಡಬೇಡಿ.

ಕರ್ಕ: ಬೆಳ್ಳಿಯ ಆಭರಣ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಶುಭ. ಬಟ್ಟೆ, ಪಾತ್ರೆ, ಮರದ ಸಾಮಗ್ರಿಯನ್ನು ಖರೀದಿ ಮಾಡಬಹುದು.

ಸಿಂಹ: ಸಿಂಹ ರಾಶಿಯವರು ಇಂದು ತಾಮ್ರದ ಪಾತ್ರೆ ಹಾಗೂ ಬಟ್ಟೆಯನ್ನು ಅವಶ್ಯವಾಗಿ ಖರೀದಿ ಮಾಡಿ. ಬಂಗಾರ ಕೊಂಡುಕೊಳ್ಳಬೇಡಿ. ಷೇರು ಮಾರುಕಟ್ಟೆ ಸುದ್ದಿಗೆ ಹೋಗಬೇಡಿ. ಹಾಗೆ ಕಬ್ಬಿಣದಿಂದ ಮಾಡಿದ ವಸ್ತುಗಳ ಖರೀದಿ ಬೇಡ.

ಕನ್ಯಾ: ಗಣೇಶ ಮೂರ್ತಿ ಹಾಗೂ ಚಿನ್ನದ ಆಭರಣ ಖರೀದಿ ಮಂಗಳಕರ. ಬಿಳಿ ಹಾಗೂ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಡಿ.

ತುಲಾ: ಉಡುಪು, ಅಲಂಕಾರಿಕ ವಸ್ತುಗಳು, ಸೌಂದರ್ಯ ಸಾಮಗ್ರಿ ಹಾಗೂ ಬೆಳ್ಳಿಯ ವಸ್ತುಗಳನ್ನು ಖರೀದಿ ಮಾಡುವುದು ಶುಭಕರ. ಲೋಹದ ವಸ್ತುಗಳಿಂದ ದೂರವಿರಿ.

ವೃಶ್ಚಿಕ : ವಿದ್ಯುನ್ಮಾನ ಸಾಧನ ಹಾಗೂ ಚಿನ್ನದ ಆಭರಣ ಖರೀದಿ ಮಾಡಿದ್ರೆ ಲಕ್ಷ್ಮಿಯ ವಿಶೇಷ ಅನುಗ್ರಹ ಲಭಿಸಲಿದೆ. ಕಬ್ಬಿಣದ ವಸ್ತುಗಳನ್ನು ಕೊಂಡುಕೊಳ್ಳಬೇಡಿ.

ಧನು: ಬಂಗಾರದ ಆಭರಣ ಹಾಗೂ ತಾಮ್ರದ ಪಾತ್ರೆ ಖರೀದಿಸಿ. ವಜ್ರ ಹಾಗೂ ಬೆಲೆ ಬಾಳುವ ಹರಳುಗಳನ್ನು ಖರೀದಿ ಮಾಡಬಹುದು.

ಮಕರ: ಮಕರ ರಾಶಿಯವರು ವಾಹನ, ಬೆಳ್ಳಿಯ ಪಾತ್ರೆ ಹಾಗೂ ಆಭರಣ ಖರೀದಿ ಮಾಡಿ. ಎಲೆಕ್ಟ್ರಾನಿಕ್ ವಸ್ತುಗಳ ಸುದ್ದಿಗೆ ಹೋಗಬೇಡಿ.

ಕುಂಭ: ಸೌಂದರ್ಯ ಸಾಮಗ್ರಿ, ಪಾದರಕ್ಷೆ ಖರೀದಿ ಮಾಡುವುದರಿಂದ ಸಾಕಷ್ಟು ಲಾಭ ಸಿಗಲಿದೆ. ಬಂಗಾರವನ್ನು ಖರೀದಿ ಮಾಡಬೇಡಿ.

ಮೀನ: ಚಿನ್ನದ ಆಭರಣ, ಬೆಳ್ಳಿಯ ಪಾತ್ರೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಅವಶ್ಯವಾಗಿ ಖರೀದಿ ಮಾಡಬೇಕು. ಷೇರನ್ನು ಖರೀದಿ ಮಾಡಬೇಡಿ. ಹಾಗೆ ಹಣವನ್ನು ಸಾಲವಾಗಿ ನೀಡಬೇಡಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...