ಶಿವಮೊಗ್ಗದ ಸಮೀಪದಲ್ಲಿರುವ ತ್ಯಾವರೆಕೊಪ್ಪ ಸಿಂಹಧಾಮದ ಬಳಿ ಚಿರತೆ ಸಂಚಾರ ನಡೆಸಿರುವುದು ಕಂಡು ಬಂದಿದೆ. ಇದನ್ನು ಗಮನಿಸಿರುವ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಹಾಗೆಂದು ಇದು ಸಿಂಹಧಾಮದಲ್ಲಿರುವ ಚಿರತೆಯಲ್ಲ. ಬದಲಾಗಿ ಹೊರಗಿನಿಂದ ಬಂದಿರುವ ಚಿರತೆ ಎನ್ನಲಾಗಿದೆ. ಇದು ವನ್ಯಜೀವಿಗಳ ಮಿಲನ ಕಾಲವಾಗಿರುವುದರಿಂದ ಸಿಂಹಧಾಮದಲ್ಲಿರುವ ಹೆಣ್ಣು ಚಿರತೆ ವಾಸನೆ ಅನುಸರಿಸಿಕೊಂಡು ಬಂದಿರಬಹುದು ಎಂದು ಹೇಳಲಾಗಿದೆ.
ಶೆಟ್ಟಿಹಳ್ಳಿ ಕಾಡಿನಿಂದ ಈ ಚಿರತೆ ಬಂದಿರಬಹುದು ಎಂದು ಹೇಳಲಾಗಿದ್ದು, ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಚಿರತೆ ಚಲನವಲನ ವೀಕ್ಷಿಸಲು ಸಿಂಹಧಾಮದ ಸುತ್ತಮುತ್ತ ಸಿಸಿ ಟಿವಿ ಅಳವಡಿಸಲು ಸೂಚನೆ ನೀಡಲಾಗಿದೆ.