ಭೂಮಿಯ ವಾತಾವರಣದಾಚೆ ಇರುವ ಅಂತರಿಕ್ಷದಲ್ಲಿ ನೂರಾರು, ಇಲ್ಲವೇ ಸಾವಿರಾರು ಕಿಲೋಮೀಟರ್ ಎತ್ತರದ ಕಕ್ಷೆಗಳಲ್ಲಿ ಕೃತಕ ಭೂ ಉಪಗ್ರಹಗಳಿಂದು ವಿಹರಿಸುತ್ತಿವೆ. ಸಾವಿರಾರು ಸಂಖ್ಯೆಯಲ್ಲಿ ಭೂಮಿಯನ್ನು ಸುತ್ತುತ್ತಿರುವ ಈ ಸಾಧನಗಳು ಸಂಪರ್ಕ, ಮನೋರಂಜನೆ, ಹವಾಮಾನ ಮುನ್ಸೂಚನೆ, ಸಂಚಾರ, ಕೃಷಿ, ಮೀನುಗಾರಿಕೆ – ಹೀಗೆ ಭೂಮಿಯ ಮೇಲಿನ ನಮ್ಮ ದಿನನಿತ್ಯ ಜೀವನದ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿವೆ.
ಸದ್ಯಕ್ಕೆ ಇವೇ ಭೂ ಉಪಗ್ರಹಗಳಿಂದಾಗಿ ಅಂತರಿಕ್ಷದಲ್ಲಿ ಕಸದ ಪ್ರಮಾಣ ಹೆಚ್ಚಾಗುತ್ತಿದೆ. ಈ ರೀತಿಯ ಕಸಕ್ಕೆ ಸ್ಪೆಸ್ ಡೆಬ್ರಿಸ್ ಅಂತ ಹೇಳಲಾಗುತ್ತೆ. ಅಂತರಿಕ್ಷ ಕಸ ಅಂದರೇ ಭೂಮಿ ಸುತ್ತು ಹಾಕುತ್ತಿರುವ ಸೆಟಲೈಟ್ಗಳ ಹಾಳಾದ ಭಾಗಗಳು. ಇದರಿಂದಾಗಿ ಅಂತರಿಕ್ಷದಲ್ಲಿ ಕಸದ ಪ್ರಮಾಣ ಹೆಚ್ಚಾಗುತ್ತಿದೆ. ಅಮೆರಿಕಾ ಹಾಗೂ ಅಲ್ಲಿನ ಸ್ಪೆಸ್ ಎಜೆನ್ಸಿ (ನಾಸಾ), ಚೀನಾದಿಂದ ಉಡಾವಣೆ ಆಗಿರುವ ಉಪಗ್ರಹಗಳಿಂದಲೇ ಕಸದ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದೆ.
ಒಂದು ವರದಿಯ ಪ್ರಕಾರ, ಚೀನಾಗಿಂತಲೂ ಅಮೆರಿಕಾ ರಾಷ್ಟ್ರವೇ ಹೀಗೆ ಹೆಚ್ಚಿನ ಪ್ರಮಾಣದಲ್ಲಿ ಕಸ ಹಾಕುತ್ತಿದೆ ಎಂದು ಹೇಳಿದೆ. ಈಗ ಜರ್ಮನ್ ಡಾಟಾಬೆಸ್ ಕಂಪನಿ ಸ್ಟೆಟಿಸ್ಟಿಟಾ ಕೆಲ ರಾಷ್ಟ್ರಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯಾವ ಯಾವ ರಾಷ್ಟ್ರಗಳು ಅಂತರಿಕ್ಷದಲ್ಲಿ ಹೆಚ್ಚಿನ ಪ್ರಮಾಣ ಕಸ ಹಾಕುತ್ತಿದೆ ಎಂದು ಹೇಳಲಾಗಿದೆ.
ನೀವೇನಾದರೂ ಅಮೆರಿಕಾ ಅಂದುಕೊಂಡರೆ ಈಗ ಅಮೆರಿಕಾ ಕೂಡಾ ಅಲ್ಲ, ಚೀನಾ ಕೂಡಾ ಅಲ್ಲ. ಈ ಪಟ್ಟಿಯಲ್ಲಿ ರಷ್ಯಾ ಮೊದಲನೇ ಸ್ಥಾನದಲ್ಲಿದೆ. ಫೆಬ್ರವರಿ 4,2022 ರಂತೆ ನಾಸಾದ ಆರ್ಬಿಟಲ್ ಡೆಬ್ರಿಸ್ ಕ್ವಾರ್ಟರ್ಲಿ ನ್ಯೂಸ್ನ ಡೇಟಾವನ್ನು ಉಲ್ಲೇಖಿಸಿ ಸ್ಟ್ಯಾಟಿಸ್ಟಾ ಇದನ್ನು ವರದಿ ಮಾಡಿದೆ. ಸದ್ಯಕ್ಕೆ ರಷ್ಯಾದ 7 ಸಾವಿರಕ್ಕೂ ಹೆಚ್ಚು ರಾಕೆಟ್ ಬಾಡಿಗಳು ಬಾಹ್ಯಾಕಾಶದಲ್ಲಿ ಕಸವಾಗಿ ತಿರುಗಾಡುತ್ತಿವೆ ಎಂದು ಹೇಳಲಾಗಿದೆ.
ಇನ್ನೂ ಈ ಪಟ್ಟಿಯಲ್ಲಿ 5,216 ರಾಕೆಟ್ ಬಾಹ್ಯಾಕಾಶ ತ್ಯಾಜ್ಯದೊಂದಿಗೆ ಅಮೆರಿಕಾ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಚೀನಾ, ಉಳಿದಂತೆ ಜಪಾನ್, ಫ್ರಾನ್ಸ್ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದೆ. ಹಾಗಾದ್ರೆ 6ನೇ ರಾಷ್ಟ್ರ ಯಾವುದು ಅಂತಿರಾ. ಈ ಸ್ಥಾನದಲ್ಲಿದೆ ಭಾರತ.
ಭಾರತ 114 ಬಾಹ್ಯಾಕಾಶ ತ್ಯಾಜ್ಯಗಳನ್ನ ಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಇದೇ ರೀತಿ ಅನೇಕ ರಾಷ್ಟ್ರಗಳ ಉಪಗ್ರಹದಿಂದಾಗಿ ಅಂತರಿಕ್ಷದಲ್ಲಿ ತ್ಯಾಜ್ಯಗಳ ಪ್ರಮಾಣ ಹೆಚ್ಚಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಉಂಟಾಗಬಹುದು ಅಂತ ಹೇಳಲಾಗುತ್ತಿದೆ. ಉಪಗ್ರಹಗಳ ಚಲನವಲನಕ್ಕೆ ಇವು ಅಡ್ಡಿಯನ್ನು ಉಂಟು ಮಾಡಬಹುದು. ಉಪಗ್ರಹಗಳನ್ನ ಸಹ ಹಾನಿ ಮಾಡಬಹುದು ಅಂತ ವಿಶೇಷಜ್ಞರು ಹೇಳಿದ್ದಾರೆ.