ಒದ್ದೆ ಉಡುಪುಗಳನ್ನು ಧರಿಸಿದಾಗ, ದೇಹ ವಿಪರೀತ ಬೆವರಿದಾಗ, ಹೆಚ್ಚು ನಡೆದಾಗ ತೊಡೆಯ ಒಳಭಾಗದಲ್ಲಿ ಗಾಯಗಳಾಗುತ್ತವೆ, ತ್ವಚೆಯ ಮೇಲ್ಭಾಗದ ಸಿಪ್ಪೆ ಜಾರಿ ಹೋಗುತ್ತದೆ. ಇದನ್ನು ನಿವಾರಿಸುವುದು ಹೇಗೆ?
ತೊಡೆಯ ಮಧ್ಯೆ ಉಂಟಾಗುವ ನೋವು ನಡೆಯಲು ಆಗದಷ್ಟು ನೋವು ಕೊಡುತ್ತದೆ. ಹೀಗಾದಾಗ ಗಾಯವಾದ ಜಾಗಕ್ಕೆ ತೆಂಗಿನೆಣ್ಣೆಯನ್ನು ಹಚ್ಚಿ. ರಾತ್ರಿ ಮಲಗುವ ವೇಳೆ ಒಳ ಉಡುಪುಗಳನ್ನು ತೆಗೆದಿಟ್ಟು ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡರೆ ಮರುದಿನ ಬೆಳಿಗ್ಗೆ ನೋವು ಕಡಿಮೆಯಾಗಿರುತ್ತದೆ.
ನಿಮ್ಮ ಆರೋಗ್ಯ ಹಾಳು ಮಾಡುತ್ತೆ ಮೈಕ್ರೊವೇವ್
ಒಳಉಡುಪುಗಳು ಒದ್ದೆಯಾಗಿರುವಾಗ ಬಳಸದಿರಿ. ವಿಪರೀತ ನಡೆದಾಗ ಬೆವರಿದಾಗ ಹಾಗೂ ಜಿಮ್ಮಿ ನಿಂದ ಮರಳಿದ ಬಳಿಕ ಒಳ ಉಡುಪುಗಳನ್ನು ಬದಲಾಯಿಸಿ. ಸ್ನಾನ ಮಾಡಿದರೆ ಮತ್ತು ಒಳ್ಳೆಯದು.
ಹೆಚ್ಚು ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ಕೆಲವೊಮ್ಮೆ ಹೀಗಾಗುತ್ತದೆ. ಬೇಸಿಗೆಯಲ್ಲಿ ಕಾಟನ್ ವಸ್ತ್ರಗಳಿಗೆ ಮೊದಲ ಆದ್ಯತೆ ನೀಡಿ. ಪೆಟ್ರೋಲಿಯಂ ಜೆಲ್ಲಿಗಳನ್ನು ಹಚ್ಚುವುದರಿಂದಲೂ ಈ ನೋವು ಹಾಗೂ ಗಾಯವನ್ನು ಕಡಿಮೆ ಮಾಡಿಕೊಳ್ಳಬಹುದು.