ಖ್ಯಾತ ಗಾಯಕರಾದ ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರ ತೇರೆ ಮೇರೆ ಮಿಲನ್ ಕಿ ಯೇ ರೈನೆ ಹಾಡನ್ನು ತಂದೆ-ಮಗಳ ಜೋಡಿಯೊಂದು ಬಹಳ ಸೊಗಸಾಗಿ ಹಾಡಿದ್ದಾರೆ. ಈ ವಿಡಿಯೋವನ್ನು ಆನ್ಲೈನ್ ನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.
ವಿಡಿಯೋವನ್ನು ಜೂಹಿ ಸಿಂಗ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಿರು ವಿಡಿಯೊದಲ್ಲಿ, ಯುವತಿಯು ಗಿಟಾರ್ ನುಡಿಸುತ್ತಾ ಹಾಡಿದ್ದಾರೆ. 1973 ರ ಅಭಿಮಾನ್ ಚಲನಚಿತ್ರದ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ನಂತರ ಆಕೆಯ ತಂದೆ ಕೂಡ ಪುತ್ರಿಯೊಂದಿಗೆ ಸೇರಿಕೊಂಡಿದ್ದಾರೆ. ಇಬ್ಬರೂ ಕೂಡ ಅತ್ಯಂತ ಮಧುರವಾಗಿ ಗೀತೆಯನ್ನು ಹಾಡಿದ್ದಾರೆ.
ಆನ್ಲೈನ್ನಲ್ಲಿ ಹಂಚಿಕೊಂಡ ನಂತರ, ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ನೆಟ್ಟಿಗರು ತಂದೆ-ಮಗಳ ಅದ್ಭುತ ಕಂಠಕ್ಕೆ ಮನಸೋತಿದ್ದಾರೆ.
ತೇರೆ ಮೇರೆ ಮಿಲನ್ ಕಿ ಯೇ ರೈನಾ 1973ರ ಅಭಿಮಾನ್ ಚಲನಚಿತ್ರದ ಹಾಡಾಗಿದೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರು ಗಾಯನ ನೀಡಿದ್ದಾರೆ. ಎಸ್ಡಿ ಬರ್ಮನ್ ಸಂಗೀತ ಸಂಯೋಜಿಸಿದ್ದರೆ, ಮಜ್ರೂಹ್ ಸುಲ್ತಾನ್ಪುರಿ ಸಾಹಿತ್ಯವಿದೆ.