
ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸುವ ಜೊತೆಗೆ ಮನೆ ಬಾಗಿಲಿಗೆ ಮಾವಿನ ತೋರಣವನ್ನು ಕಟ್ಟಲಾಗುತ್ತದೆ. ಪಚ್ಚಡಿಯನ್ನು ಮಾಡಿ ನೀಡಲಾಗುತ್ತದೆ. ಹುಣಿಸೇಹಣ್ಣು, ಮಾವಿನಕಾಯಿ, ತೆಂಗಿನಕಾಯಿ, ಬೇವಿನ ಎಲೆ, ಬೆಲ್ಲವನ್ನು ಹಾಕಿ ಪಚ್ಚಡಿ ಮಾಡಲಾಗುತ್ತದೆ.
ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದವರು ತಮ್ಮ ಕಚೇರಿಯಲ್ಲಿ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ. ತೆಲಂಗಾಣದ ಕೆಲ ಪ್ರದೇಶಗಳ ಜನರು ತಮ್ಮ ಕುಟುಂಬದವರಿಗೊಂದೇ ಅಲ್ಲ ತೋಟದಲ್ಲಿ ಕೆಲಸ ಮಾಡುವ ಜನರಿಗೂ ಬಟ್ಟೆ ಕೊಡಿಸುತ್ತಾರೆ. ಜಾನುವಾರುಗಳಿಗೆ ಸ್ನಾನ ಮಾಡಿಸುವ ಪದ್ಧತಿಯೂ ಇದೆ. ತೆಲಂಗಾಣ ಪ್ರದೇಶದಲ್ಲಿ ಯುಗಾದಿಯನ್ನು ಮೂರು ದಿನ ಆಚರಿಸ್ತಾರೆ.