ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದ್ದು, ಇದರ ಮಧ್ಯೆ ಬಿ ಆರ್ ಎಸ್ ಬಿಜೆಪಿ ವಿರುದ್ಧ ಪೋಸ್ಟರ್ ವಾರ್ ಮುಂದುವರಿಸಿದೆ.
ಈ ಹಿಂದೆ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ವಾಷಿಂಗ್ ಪೌಡರ್ ನಿರ್ಮಾ ಜಾಹೀರಾತಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಳಿ ಬಂದ ಬಿಜೆಪಿ ನಾಯಕರ ಫೋಟೋ ಅಂಟಿಸಿ ಅವರ ಹೆಸರುಗಳನ್ನು ಬಿ ಆರ್ ಎಸ್ ಉಲ್ಲೇಖಿಸಿ ವ್ಯಂಗ್ಯ ಮಾಡಿತ್ತು. ಇದರಲ್ಲಿ ಕರ್ನಾಟಕದ ಕೆ.ಎಸ್. ಈಶ್ವರಪ್ಪ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಅವರ ಹೆಸರುಗಳು ಸಹ ಇದ್ದವು.
ಇದೀಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಚಿತ್ರವಿರುವ ವಾಂಟೆಡ್ ಪೋಸ್ಟರ್ಗಳನ್ನು ಹೈದರಾಬಾದಿನ ಹಲವೆಡೆ ಅಂಟಿಸಲಾಗಿದೆ. ಇದರಲ್ಲಿ ಶಾಸಕರ ಖರೀದಿಯಲ್ಲಿ ಚತುರ ಎಂದು ವ್ಯಂಗ್ಯ ಮಾಡಲಾಗಿದ್ದು, ಸುಳಿವು ನೀಡಿದವರಿಗೆ ಮೋದಿಯವರು ಈ ಹಿಂದೆ ನೀಡಿದ್ದ 15 ಲಕ್ಷ ರೂಪಾಯಿ ಭರವಸೆಯ ಬಹುಮಾನ ನೀಡಲಾಗುತ್ತದೆ ಎಂದು ಟಾಂಗ್ ನೀಡಿದೆ.