ಕ್ರಿಕೆಟಿಗ ಶುಭಮನ್ ಗಿಲ್ ಹೆಸರು ಸಚಿನ್ ತೆಂಡೂಲ್ಕರ್ ಪುತ್ರಿ ಜೊತೆ ಥಳುಕು ಹಾಕಿಕೊಂಡಿದ್ದು ಎಲ್ರಿಗೂ ಗೊತ್ತಿದೆ. ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಡೇಟಿಂಗ್ ಮಾಡ್ತಿದ್ದಾರೆ ಅನ್ನೋದನ್ನು ಅಭಿಮಾನಿಗಳೇ ಪತ್ತೆ ಮಾಡಿದ್ದರು.
ಆದ್ರೆ ಈ ಬಗ್ಗೆ ಸಾರಾ ಅಥವಾ ಶುಭಮನ್ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಅಭಿಮಾನಿಗಳಿಗೆ ಶಾಕಿಂಗ್ ಆಗಿರೋ ವಿಚಾರವೊಂದು ಬಹಿರಂಗವಾಗಿದೆ. ಶುಭಮನ್ ಗಿಲ್, ಸಾರಾ ಜೊತೆಗೆ ಡೇಟಿಂಗ್ನಲ್ಲಿಲ್ಲ. ಬದಲಾಗಿ ಬಾಲಿವುಡ್ ನಟಿ, ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿ ಖಾನ್ ಜೊತೆಗೆ ರಿಲೇಶನ್ಷಿಪ್ನಲ್ಲಿದ್ದಾರಂತೆ.
ಖುದ್ದು ಶುಭಮನ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನಟಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡ್ತಿರೋದಾಗಿ ಟಾಕ್ ಶೋ ಒಂದರಲ್ಲಿ ಅವರು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಸಾರಾ ಅಲಿ ಖಾನ್ ಹಾಗೂ ಶುಭಮನ್ ಒಂದೇ ಹೋಟೆಲ್ ಲಾಬಿಯಲ್ಲಿ ಕಾಣಿಸಿಕೊಂಡಿದ್ದರು. ಒಂದೇ ವಿಮಾನದಲ್ಲೂ ಪ್ರಯಾಣಿಸಿದ್ದರು. ಹಾಗಾಗಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಅನ್ನೋ ಗುಸು ಗುಸು ಶುರುವಾಗಿತ್ತು. ಆ ವದಂತಿ ಈಗ ನಿಜವಾಗಿದೆ. ವಿಶೇಷ ಅಂದ್ರೆ ಶುಭಮನ್ ಹೆಸರು ಸಾರಾ ಎಂಬ ಹೆಸರಿನೊಂದಿಗೇ ಥಳುಕು ಹಾಕಿಕೊಳ್ತಾ ಇದೆ.