ತೆಂಗಿನ ಮರ ಹತ್ತುವ ಸಂದರ್ಭದಲ್ಲಿ ಬಿದ್ದು ಬಹಳಷ್ಟು ಮಂದಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಕೆಲವೊಮ್ಮೆ ಸಾವು ಸಂಭವಿಸಿ ಸಂತ್ರಸ್ತರ ಕುಟುಂಬದವರು ಅನಾಥರಾಗಿದ್ದಾರೆ. ಇಂತವರುಗಳ ನೆರವಿಗೆಂದು ತೆಂಗು ಅಭಿವೃದ್ಧಿ ಮಂಡಳಿ ಮಹತ್ವದ ಯೋಜನೆಯೊಂದನ್ನು ಪರಿಚಯಿಸಿದೆ.
ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಸಹಯೋಗದೊಂದಿಗೆ ‘ಕೇರಾ ಸುರಕ್ಷಾ ವಿಮೆ’ ಯೋಜನೆಯನ್ನು ಪರಿಚಯಿಸಲಾಗಿದ್ದು, ಇದರಡಿ ತೆಂಗಿನ ಮರ ಹತ್ತುವವರಿಗೆ / ಕೊಯ್ಲು ಮಾಡುವವರಿಗೆ / ನೀರಾ ತಂತ್ರಜ್ಞರಾಗಿ ವೃತ್ತಿ ಮಾಡುವವರಿಗೆ ಅಪಘಾತ ವಿಮಾ ಸುರಕ್ಷೆ ಲಭ್ಯವಾಗಲಿದೆ.
ವಾರ್ಷಿಕ ವಿಮಾ ಕಂತು ಕೇವಲ 99 ರೂಪಾಯಿಗಳಾಗಿದ್ದು, ಐದು ಲಕ್ಷ ರೂಪಾಯಿಗಳವರೆಗೆ ವಿಮಾ ಮೊತ್ತ ಕವರ್ ಆಗಲಿದೆ. ಸಾವು, ಅಂಗವೈಕಲ್ಯ ಹಾಗೂ ಅಪಘಾತಗಳಿಂದಾಗಿ ಆಗಬಹುದಾದ ನಿರುದ್ಯೋಗ ವಿಮಾ ವ್ಯಾಪ್ತಿಗೆ ಬರಲಿದ್ದು, 18ರಿಂದ 65 ವರ್ಷದವರು ಯೋಜನೆಯಡಿ ವಿಮೆ ಪಡೆದುಕೊಳ್ಳಬಹುದಾಗಿದೆ. ಅರ್ಜಿ ನಮೂನೆಗಳು ತೆಂಗು ಅಭಿವೃದ್ಧಿ ಮಂಡಳಿಯ ಜಾಲತಾಣ https://www coconutboard.gov.in/docs/Appl-kerasurksha.pdf ಲಭ್ಯವಿದ್ದು, ಇವುಗಳನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಬಳಿಕ ಸಲ್ಲಿಸಬಹುದಾಗಿದೆ.