ಏರುತ್ತಿರುವ ತೂಕವನ್ನು ಹೇಗೆ ಇಳಿಸೋದು ಎಂಬ ಚಿಂತೆ ಅನೇಕರನ್ನು ಕಾಡಿದ್ರೆ, ತೂಕ ಹೆಚ್ಚಿಸಿಕೊಳ್ಳೋದು ಹೇಗೆ ಎಂಬ ಚಿಂತೆ ಮತ್ತೆ ಕೆಲವರನ್ನು ಕಾಡುತ್ತದೆ. ಕಡ್ಡಿ ಎಂದು ರೇಗಿಸಿದ್ರೆ ಬೇಸರವಾಗೋದು ಸಹಜ. ತೂಕ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಮಾತ್ರೆಗಳ ಮೊರೆ ಹೋಗ್ತಾರೆ.
ಮಾತ್ರೆಯಿಂದ ತೂಕ ಹೆಚ್ಚಾಗಲು ಸಾಧ್ಯವಿಲ್ಲ. ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸರಳವಾಗಿ ಹೇಗೆ ತೂಕ ಹೆಚ್ಚಿಸಿಕೊಳ್ಳಬಹುದೆಂದು ನಾವು ಹೇಳ್ತೇವೆ ಕೇಳಿ.
ಮೊದಲು ನೀವು ಕ್ಯಾಲೋರಿ ಬಗ್ಗೆ ಗಮನ ಕೊಡಿ. ಎಷ್ಟು ಕ್ಯಾಲೋರಿ ಆಹಾರ ನೀವು ಸೇವಿಸುತ್ತಿದ್ದೀರಿ. ನಿಮ್ಮ ದೇಹದಲ್ಲಿ ಎಷ್ಟು ಕ್ಯಾಲೋರಿ ಇದೆ ಎಂಬುದರ ಬಗ್ಗೆ ನೋಟ್ ಮಾಡಿಕೊಳ್ಳುತ್ತಿರಿ.
ಉತ್ತಮವಾದ ಆಹಾರ ಸೇವಿಸಿ. ಕ್ಯಾಲೋರಿ ಜೊತೆಗೆ ಪೌಷ್ಠಿಕಾಂಶಗಳ ಆಹಾರ ನಿಮಗೆ ಬೇಕು. ಬೊಜ್ಜು ದೇಹ ಒಳ್ಳೆಯದಲ್ಲ. ಹಾಗಾಗಿ ಕ್ಯಾಲೋರಿ ಇರುವ ಆಹಾರವನ್ನೊಂದೆ ಅಲ್ಲ, ಪೌಷ್ಠಿಕಾಂಶ ಇರುವ ಆಹಾರವನ್ನು ಸೇವಿಸಬೇಕು.
ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ದಿನದಲ್ಲಿ ಅನೇಕ ಬಾರಿ ಆಹಾರ ಸೇವಿಸಬೇಕು. 2-3 ಗಂಟೆಗೊಮ್ಮೆ ಆಹಾರ ಸೇವಿಸುತ್ತಿರಬೇಕು.
ಹಾಲನ್ನು ಕುಡಿಯಬೇಕು. ಜೊತೆಗೆ ಡ್ರೈ ಫ್ರೂಟ್ಸ್ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದು. ನಿದ್ರೆ ಕೂಡ ಅತಿ ಮುಖ್ಯ. 8 ಗಂಟೆ ಸರಿಯಾಗಿ ನಿದ್ದೆ ಮಾಡಬೇಕು.
ನೀರನ್ನು ಕುಡಿಯುವುದು ಕಡ್ಡಾಯ. ನೀವು ನೀರನ್ನು ಕಡಿಮೆ ಕುಡಿದ್ರೆ ನಿಮಗೆ ಕೆಲಸ ಮಾಡುವ ಶಕ್ತಿ ಇರುವುದಿಲ್ಲ. ಇದು ಕೂಡ ನಿಮ್ಮ ತೂಕ ಇಳಿಕೆಗೆ ಕಾರಣವಾಗುತ್ತದೆ.